ನ್ಯೂಸ್ ನಾಟೌಟ್: ಬೆಳ್ಳಾರೆಯಲ್ಲಿ ಹಳೆ ಸರಕಾರಿ ಆಸ್ಪತ್ರೆ ಕಟ್ಟಡ ಕೆಡವುತ್ತಿರುವಾಗ ಗೋಡೆ ಕುಸಿದು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಿಸಲು ಹಳೆಯ ಕಟ್ಟಡವನ್ನು ಕೆಡವಲಾಗುತ್ತಿದೆ. ಹಾಗಾಗಿ ಕೆಲವು ಕಾರ್ಮಿಕರು ಕಟ್ಟಡ ಕೆಡವುವ ಕಾರ್ಯದಲ್ಲಿ ತೊಡಗಿದ್ದರು. ಊಟ ಮಾಡಿದ ನಂತರ ಮಂಜುನಾಥ್ ಅವರು ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭ ಅವರ ಮೇಲೆ ಗೋಡೆಗಳು ಕುಸಿದು ಬಿದ್ದು ಗಂಭೀರ ಗಾಯಗಳಾಗಿವೆ. ಕೂಡಲೇ ಅಲ್ಲಿದ್ದ ಇತರೆ ಕಾರ್ಮಿಕರು ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸರಾದರೂ ಅವರು ಮೃತಪಟ್ಟರು.