ನ್ಯೂಸ್ ನಾಟೌಟ್ : ವೈದ್ಯರನ್ನು ದೇವರಿಗೆ ಹೋಲಿಸುತ್ತೇವೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರ ಮೇಲೆ ನಂಬಿಕೆಯಿಟ್ಟು,ಅವರು ಕೊಟ್ಟ ಔಷಧಿಯನ್ನು ತೆಗೆದುಕೊಳ್ಳುತ್ತೇವೆ. ಆದರೆ ವೈದ್ಯರೇ ಎಡವಟ್ಟು ಮಾಡಿ ಜೀವಕ್ಕೆ ಅಪಾಯ ತಂದಿಟ್ಟರೆ ಹೇಗೆ? ಇಲ್ಲೊಬ್ಬ ವೈದ್ಯ ತಪ್ಪು ಮಾಡಿದ ಪರಿಣಾಮ ವ್ಯಕ್ತಿಯೊಬ್ಬ ಜೀವನಪರ್ಯಂತ ನೋವು ಅನುಭವಿಸಿದ ಪರಿಸ್ಥಿತಿ ಇಟಲಿಯಲ್ಲಿ ನಡೆದಿದೆ.
ಘಟನೆಯ ವಿವರ:
ವೃದ್ದ ವ್ಯಕ್ತಿಯೊಬ್ಬ ಜನನಾಂಗದ ಅಂಗದಲ್ಲಿ ನೋವು ಕಾಣಿಸಿಕೊಂಡ ಕಾರಣ ಇಟಲಿಯ ಸ್ಯಾನ್ ಡೊನಾಟೊ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸುತ್ತಾರೆ. 30 ವರ್ಷದ ವೈದ್ಯ ವ್ಯಕ್ತಿಯನ್ನು ಪರೀಕ್ಷೆ ಮಾಡಿದ ಬಳಿಕ ನಿಮಗೆ ಕ್ಯಾನ್ಸರ್ ಗಡ್ಡೆಯಾಗಿದೆ ಅದನ್ನು ಆಪರೇಷನ್ ಮಾಡಿ ತೆಗಿಬೇಕೆಂದು ಹೇಳಿದ್ದಾರೆ. ಇದಾದ ಒಂದು ತಿಂಗಳ ಬಳಿಕ 2018 ರ ನವೆಂಬರ್ 13 ರಂದು ವ್ಯಕ್ತಿಗೆ ಆಪರೇಷನ್ ಮೂಲಕ ಗಡ್ಡೆಯನ್ನು ತೆಗೆಯಲು ವೈದ್ಯರು ಸಿದ್ಧರಾಗುತ್ತಾರೆ. ಖಾಸಗಿ ಅಂಗದಲ್ಲೇ ಗೆಡ್ಡೆಯಾಗಿದೆ ಎಂದು ವೈದ್ಯ ಖಾಸಗಿ ಅಂಗವನ್ನೇ ಆಪರೇಷನ್ ಮೂಲಕ ಕತ್ತರಿಸಿ ತೆಗೆಯುತ್ತಾರೆ.
ಆಪರೇಷನ್ ಆದ ಬಳಿಕ ವೃದ್ದನಿಗೆ ಇದ್ದ ಸಮಸ್ಯೆ ಕ್ಯಾನ್ಸರ್ ಅಲ್ಲ ಅದನ್ನು ಔಷಧಿಯಿಂದಲೇ (ಶಿಶ್ನದ ಚರ್ಮದ ಮೇಲೆ ಸಿಫಿಲಿಸ್ ಸಮಸ್ಯೆಯಿತ್ತು ) ಗುಣಪಡಿಸಬಹುದಿತ್ತು ಎನ್ನುವುದು ತಿಳಿಯುತ್ತದೆ. ವೈದ್ಯ ಕ್ಯಾನ್ಸರ್ ಗೆಡ್ಡೆಯೆಂದು ತಪ್ಪಾಗಿ ರೋಗವನ್ನು ಪತ್ತೆ ಮಾಡಿದ ಪರಿಣಾಮ ವೃದ್ದ ಇದೀಗ ಗಂಭೀರ ಸಮಸ್ಯೆಗೆ ಒಳಗಾಗಿದ್ದಾರೆ.ತಪ್ಪು ಮಾಡಿದ ವೈದ್ಯ ಈಗ ತನಿಖೆಗೆ ಒಳಗಿದ್ದಾನೆ. ತನಗೆ ನ್ಯಾಯಬೇಕೆಂದು ವೃದ್ದ ಕೋರ್ಟಿನ ಮೆಟ್ಟಿಲು ಹತ್ತಿದ್ದಾರೆ. ಈ ಪ್ರಕರಣದ ವಿಚಾರಣೆ ಮಾರ್ಚ್ 9 ರಂದು ನಡೆಯಲಿದೆ ಎಂದು ವರದಿ ತಿಳಿಸಿದೆ.