ನ್ಯೂಸ್ ನಾಟೌಟ್ : ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಬೇಟೆಯಾಡುವ ಪ್ರವಾಸದಲ್ಲಿ ವ್ಯಕ್ತಿಯೊಬ್ಬರು ಆ ದಟ್ಟನೆ ಅರಣ್ಯದಲ್ಲಿ ಕಳೆದು ಹೋಗಿ, ಒಂದು ತಿಂಗಳ ಬಳಿಕ ಆತನನ್ನು ಪತ್ತೆ ಹಚ್ಚಲಾಗಿದೆ.ಈತ 31 ದಿನಗಳ ಕಾಲ ಆ ಕಾಡಿನಲ್ಲಿ ಎರೆ ಹುಳ ಹಾಗೂ ತನ್ನದೇ ಮೂತ್ರ ಕುಡಿದು ಬದುಕಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.
ಜನವರಿ 25ರಂದು ಉತ್ತರ ಬೊಲಿವಿಯಾದಲ್ಲಿ ಬೇಟೆಯಾಡುವ ಪ್ರವಾಸದಲ್ಲಿ 30 ವಯಸ್ಸಿನ ಜೊನಾಟನ್ ಅಕೋಸ್ಟಾ ಎಂಬಾತ ತನ್ನ ತಂಡದಿಂದ ಬೇರ್ಪಟ್ಟು ಕಳೆದು ಹೋಗಿದ್ದನು. ಸುಮಾರು ಒಂದು ತಿಂಗಳಿನಿಂದ ಪಾರುಗಾಣಿಕ ತಂಡಗಳು ಆತನನ್ನು ಪತ್ತೆ ಹಚ್ಚುವಲ್ಲಿ ತೊಡಗಿದ್ದರು. 31 ದಿನಗಳ ನಂತರ ಜೊನಾಟನ್ ಅಕೋಸ್ಟಾ ಪತ್ತೆಯಾದಾಗ ಆತ 17 ಕೆಜಿ ತೂಕ ಕಳೆದುಕೊಂಡಿದ್ದಾನೆ. ಬಳಿಕ ಆತನನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಆತನ ಗಡ್ಡ ಮತ್ತು ಕೂದಲು ಬೋಳಿಸಿದರು.
ಅವರು ಕಾಡಿನಲ್ಲಿ ಅನುಭವಿಸಿದ ಕಷ್ಟವನ್ನು ವಿವರಿಸಿದ್ದಾರೆ. ಕಾಡಿನಲ್ಲಿ ಸಿಕ್ಕ ಹುಳು, ಕೀಟ, ಪಪ್ಪಾಯಿಯಂತಹ ಕಾಡು ಹಣ್ಣು ತಿಂದು ಬದುಕಿದೆ ಎಂದು ಹೇಳಿಕೊಂಡಿದ್ದಾರೆ.ಬಾಯಾರಿಕೆ ಆದಾಗ ದೇವರಲ್ಲಿ ಮಳೆಗಾಗಿ ಪ್ರಾರ್ಥಿಸಿದೆ, ಮಳೆ ಬಾರದಿದ್ದರೆ ಬದುಕಲು ಸಾಧ್ಯವಾಗುತ್ತಿರಲಿಲ್ಲ . ತಮ್ಮ ರಬ್ಬರ್ ಬೂಟುಗಳಲ್ಲಿ ಮಳೆ ನೀರು ಸಂಗ್ರಹಿಸಿ ಕುಡಿಯುತ್ತಿದ್ದೆ. ಆದರೆ ನೀರು ಸಿಗದಿದ್ದರೆ ಮೂತ್ರವನ್ನು ಕುಡಿಯುತ್ತಿದ್ದೆ ಎಂಬ ರೋಚಕ ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ.