ನ್ಯೂಸ್ನಾಟೌಟ್: ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಎಂಬಲ್ಲಿ ಅಕ್ಕಪಕ್ಕದ ಎರಡು ಮನೆಗಳ ಜನರ ನಡುವೆ ವಾಗ್ವಾದ ನಡೆದು ವ್ಯಕ್ತಿಯೋರ್ವ ಸಾರ್ವಜನಿಕರಿಗೆ ಗನ್ ತೋರಿಸಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಆರೋಪಿಯನ್ನು ಪುತ್ತೂರು ಮೂಲದ ರಾಜೇಶ್ ರೈ ಎಂದು ಗುರುತಿಸಲಾಗಿದೆ.
ಮೂಡುಶೆಡ್ಡೆ ಗ್ರಾಮಪಂಚಾಯತ್ ಎದುರುಪದವಿನಲ್ಲಿ ಘಟನೆ ನಡೆದಿದ್ದು, ಆರೋಪಿ ನೆರೆಮನೆಯ ಯುವತಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಸಾರ್ವಜನಿಕ ಗನ್ ತೋರಿಸಿ ಬೆದರಿಸಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಬಿಸಿ ನೀರು ಎರಚಿದ್ದಾನೆ. ಈ ಸಂದರ್ಭ ಸಾರ್ವಜನಿಕರು ಆರೋಪಿಯನ್ನು ಹಿಡಿದು ಥಳಿಸಿಸಿದ್ದು, ಬಳಿಕ ಕಾವೂರು ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.