ನ್ಯೂಸ್ ನಾಟೌಟ್: ಸಂಗಾತಿ ಖುಷಿಯಿಂದಿರಬೇಕೆಂದು ದುಬಾರಿ ಗಿಫ್ಟ್ ಗಳನ್ನು ನೀಡುವುದು ನೋಡಿದ್ದೇವೆ. ಸಾಕಷ್ಟು ಮಂದಿ ತನ್ನ ಸಂಗಾತಿಗೆ ಡೈಮಂಡ್ ರಿಂಗ್ ,ನೆಕ್ಲೇಸ್ ಗಿಫ್ಟ್ ಕೊಟ್ಟು ಸಂತಸಪಡಿಸುತ್ತಾರೆ.ಆದರೆ ಇಲ್ಲೊಬ್ಬ ತನ್ನ ಸಂಗಾತಿಯನ್ನು ಖುಷಿಯಿಂದಿರಿಸಲು ಕ್ರಿಯೇಟಿವ್ ಯೋಚನೆ ಮೂಲಕ ಗಿಫ್ಟ್ ಮಾಡಿದ್ದಾನೆ..ಅದೇನು ಗೊತ್ತಾ?
ಹೌದು, ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಾಂಗ್ ಎಂಬಾತ ತನ್ನ ಗೆಳತಿಗೆ ಒಂದು ರೂಪಾಯಿ ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಒಂದನ್ನು ಗಿಫ್ಟ್ ನೀಡಿದ್ದಾನೆ.ಅದು ಕೂಡ ಕ್ರಿಯೇಟಿವ್ ಯೋಚನೆ ಮೂಲಕ.ಇದಕ್ಕೆ ಆತನ ಸಂಗಾತಿ ಫುಲ್ ಖುಷ್ ಆಗಿದ್ದು,ವಿಭಿನ್ನ ಗಿಫ್ಟ್ ಗೆ ಮನಸೋತು ಹೋಗಿದ್ದಾಳೆ.
ಹೇಗಂತಿರಾ?
ಬೆಳಕಿನ ಮೂಲಕ ಪ್ರತಿಬಿಂಬದಲ್ಲಿ ಕಾಣುವ ಸುಂದರ ವಿನ್ಯಾಸದ ನೆಕ್ಲೇಸ್ ಗಿಫ್ಟ್ಇದಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಸಂಗಾತಿಗೆ ಒಂದು ಪೆಟ್ಟಿಗೆಯಲ್ಲಿ ಬಿಳಿ ಕಾಗದದ ತುಂಡನ್ನು ಇಟ್ಟು ಉಡುಗೊರೆಯಾಗಿ ನೀಡಿದ್ದಾನೆ. ಇದಾದ ಬಳಿಕ ಆಕೆಯನ್ನು ಹೊರಗಡೆ ಸೂರ್ಯನ ಬೆಳಕಿಗೆ ಕರೆದುಕೊಂಡು ಹೋಗಿ ತಾನು ಕ್ರಿಯಾತ್ಮಕವಾಗಿ ವಿನ್ಯಾಸಗಗೊಳಿಸಿದ ಬೆಳಕಿನ ಹಾರವನ್ನು ಬಿಳಿ ಕಾಗದದ ಪ್ರತಿಬಿಂಬದ ಮೂಲಕ ಆಕೆಗೆ ತೊಡಿಸಿದ್ದಾನೆ.
ವಿಡಿಯೋ ವೈರಲ್:
ಈ ಸುಂದರ ಬೆಳಕಿನ ಪ್ರತಿಬಿಂಬಕದ ಹಾರವನ್ನು ಬಿಳಿ ಹಾಳೆಯ ಮೇಲೆ ವಿನ್ಯಾಸಗೊಳಿಸಲು ಎರಡು ದಿನಗಳನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಡೌಯಿನ್ನಲ್ಲಿ ಜಾಂಗ್ ಅಪ್ಲೋಡ್ ಮಾಡಿದ ನೆಕ್ಲೇಸ್ನ ವೀಡಿಯೊವನ್ನು 62 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ. ಜೊತೆಗೆ 40,000 ಕ್ಕಿಂತಲೂ ಹೆಚ್ಚಿನ ಕಾಮೆಂಟ್ಗಳು ಬಂದಿವೆ.