ನ್ಯೂಸ್ ನಾಟೌಟ್: ಲವಂಗ ಒಂದು ಪ್ರಯೋಜನಕಾರಿ ಮೂಲಿಕೆ. ಇದರ ಸೇವನೆಯಿಂದ ಅನೇಕ ಪ್ರಯೋಜನಗಳು ಇವೆ. ಆದರೆ ಈ ಪ್ರಯೋಜನ ಪಡೆಯಲು ಅದನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡಬೇಕಾಗುತ್ತದೆ.ಹಾಗಾದ್ರೆ ಇದರ ಪ್ರಯೋಜನಗಳನ್ನ ನಾವು ತಿಳಿದುಕೊಳ್ಳೋಣ..
ಪ್ರತಿದಿನ 2 ಲವಂಗವನ್ನು ಜಗಿದು ತಿನ್ನಬೇಕು. ಇದು ನಿಮ್ಮ ಸಿಗರೇಟ್ ಮತ್ತು ಆಲ್ಕೋಹಾಲ್ ಚಟದಿಂದ ಮುಕ್ತಿ ಹೊಂದಲು ಸಹಾಯ ಮಾಡುತ್ತದೆ. ಜತೆಗೆ ಹಲ್ಲಿನ ಸಮಸ್ಯೆ ಕಡಿಮೆ ಮಾಡಲು ಲಾಭಕಾರಿ.ಲವಂಗದ ರಸವು ಯುಜೆನಾಲ್ ಅನ್ನು ಹೊಂದಿದೆ. ಇದು ಅರಿವಳಿಕೆ, ನೋವು ನಿವಾರಕ, ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣದಿಂದ ಸಮೃದ್ಧವಾಗಿದೆ. ಇದು ನಿಮಗೆ ಅನೇಕ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಲವಂಗ ಸೇವನೆಯಿಂದ ಹಸಿವು ಹೆಚ್ಚುತ್ತದೆ. ಯಾರೆಲ್ಲಾ ಹಸಿವಿನಸಮಸ್ಯೆ ಹೊಂದಿದ್ದಾರೋ ಅವರಿಗೆ ಇದು ತುಂಬಾನೇ ಪ್ರಯೋಜನಕಾರಿ. ಮನಸ್ಸು ಸಂತೋಷಗೊಳ್ಳತ್ತದೆ. ಹೊಟ್ಟೆಯ ಹುಳಗಳು ಸಾಯುತ್ತವೆ. ಪ್ರಜ್ಞೆ-ಶಕ್ತಿಯನ್ನು ಸರಿಯಾಗಿಡುತ್ತದೆ. ದೇಹದ ದುರ್ಗಂಧ ಹೋಗಲಾಡಿಸುತ್ತದೆ. ನೋವು, ಗಾಯಗಳ ಮೇಲೆ ಲೇಪಿಸಿದರೆ ಗಾಯಗಳು ಗುಣವಾಗುತ್ತವೆ.
ಲವಂಗವು ಮೂತ್ರನಾಳದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮೂತ್ರದ ಮೂಲಕ ಹಾನಿಕಾರಕ ವಸ್ತುಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಎರಡು ಲವಂಗವನ್ನು ಜಗಿದು ತಿಂದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.ಹಾಲಿಟೋಸಿಸ್ ನಿವಾರಣೆ, ಅಜೀರ್ಣ ಸಮಸ್ಯೆ ದೂರವಾಗುತ್ತದೆ. ವಾಕರಿಕೆ ಮತ್ತು ವಾಂತಿ ಕಡಿಮೆ ಆಗುತ್ತದೆ.
ಲವಂಗದ ಈ ಮನೆಮದ್ದು ಹೆಚ್ಚಿನ ಜನರಿಗೆ ಪರಿಣಾಮಕಾರಿಯಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಆದರೂ ನೀವು ವೈದ್ಯರ ಸಲಹೆ ಮೇರೆಗೆ ಲವಂಗ ಸೇವಿಸಬಹುದು. ತಲೆನೋವು ಮತ್ತು ಮೈಗ್ರೇನ್ ಕಡಿಮೆ ಮಾಡಲು ಲವಂಗದ ಬಳಕೆ ಪ್ರಯೋಜನಕಾರಿ.ತಲೆನೋವಿನ ಸಮಸ್ಯೆ ಕಡಿಮೆ ಮಾಡಲು, ಮೈಗ್ರೇನ್ನಿಂದ ಬಳಲುತ್ತಿದ್ದರೆ ಅಥವಾ ಇತರ ರೀತಿಯ ತಲೆನೋವಿನಿಂದ ತೊಂದರೆಯಿದ್ದರೆ 6 ಗ್ರಾಂ ಲವಂಗವನ್ನು ನೀರಿನಲ್ಲಿ ಪುಡಿ ಮಾಡಿ ಒಣಗಿಸಿ. ಅದನ್ನು ಸ್ವಲ್ಪ ಬಿಸಿ ಮಾಡಿ. ಇದನ್ನು ಕಿವಿಯ ಸುತ್ತ ದಪ್ಪವಾಗಿ ಹಚ್ಚಿದರೆ ತಲೆನೋವು ಅಥವಾ ಮೈಗ್ರೇನ್ ಕಡಿಮೆಯಾಗುತ್ತದೆ.