ನ್ಯೂಸ್ ನಾಟೌಟ್: ಕುರುಂಜಿಗುಡ್ಡೆ ಭಾಗದ ಜನರ ಬಹುಕಾಲದ ಬೇಡಿಕೆಯ ರಸ್ತೆ ನಿರ್ಮಾಣದ ಕನಸನ್ನು ಸುಳ್ಯ ನಗರ ಪಂಚಾಯತ್ ಹೊಸ ರಸ್ತೆ ನಿರ್ಮಿಸುವ ಮೂಲಕ ಈಡೇರಿಸಿದೆ.
ಕುರುಂಜಿಗುಡ್ಡೆಯ ಸಮೀಪದಲ್ಲಿ ಹತ್ತು ಮನೆಗಳಿದ್ದು, ಅವರಿಗೆ ಸಂಚಾರಕ್ಕೆ ರಸ್ತೆಯಿಲ್ಲದೆ ಕಾಲು ದಾರಿಯನ್ನೇ ಅವಲಂಬಿಸಬೇಕಿತ್ತು. ಪ್ರತಿ ವರ್ಷ ಚುನಾವಣೆ ವೇಳೆ ಈ ಭಾಗದ ಗ್ರಾಮಸ್ಥರು ರಸ್ತೆ ನಿರ್ಮಾಣದ ಬೇಡಿಕೆಯನ್ನು ಮುಂದಿಟ್ಟಿದ್ದರೂ ಈಡೇರಲಿಲ್ಲ. ಇದರಿಂದ ಮಕ್ಕಳಿಗೆ ಶಾಲೆಗೆ ಹೋಗಲು, ತುರ್ತುಪರಿಸ್ಥಿತಿಯಲ್ಲಿ ಸಂಚರಿಸಲು ಕಷ್ಟವಾಗುತ್ತಿತ್ತು. ಆದರೆ ಈ ಬಾರಿ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅವರಿಗೆ ಸ್ಥಳೀಯರು ರಸ್ತೆ ನಿರ್ಮಿಸುವಂತೆ ಮನವಿ ಮಾಡಿದ್ದರು. ಕೂಡಲೇ ಅವರು ಎಲ್ಲ ಮನೆಗಳಿಗೆ ತೆರಳಿ ಸ್ಥಳದ ಸಮಸ್ಯೆಯ ಬಗ್ಗೆ ತಿಳಿ ಹೇಳಿ ಈ ಮನೆಗಳಿಗೆ ಹೋಗುವ ಸಣ್ಣ ರಸ್ತೆಯನ್ನು10 ಫೀಟ್ನ ದೊಡ್ಡ ರಸ್ತೆಯಾಗಿ ನಿರ್ಮಿಸಿಕೊಟ್ಟಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಸ್ಥಳೀಯರಾದ ಚೆನ್ನಯ್ಯ ಕುರುಂಜಿಗುಡ್ಡೆ, ಉಪೇಂದ್ರ ನಾಯಕ್, ಸರಸ್ವತಿ, ಸ್ವಾಮಿನಾಥನ್, ಚಿನ್ನಸ್ವಾಮಿ, ಉದಯ ಕುರುಂಜಿಗುಡ್ಡೆ, ಮಣಿ ಕುರುಂಜಿ ಗುಡ್ಡೆ, ಸುಂದರ ಕುರುಂಜಿ ಗುಡ್ಡೆ ಜಾಗ ನೀಡಿದ್ದಾರೆ.
ಸುಮಾರು ವರ್ಷದಿಂದ ರಸ್ತೆ ನಿರ್ಮಿಸಬೇಕೆಂದು ಇಲ್ಲಿಯ ಜನರು ಬೇಡಿಕೆ ಸಲ್ಲಿಸುತ್ತಿದ್ದರು. ಆದರೆ ಈಗ ನಗರ ಪಂಚಾಯತ್ ವತಿಯಿಂದ ರಸ್ತೆ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು.
| ವಿನಯ ಕುಮಾರ್ ಕಂದಡ್ಕ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ