ನ್ಯೂಸ್ ನಾಟೌಟ್: ‘ಸಹೋದರ ಮತ್ತು ಸಹೋದರಿಯ ನಡುವೆ ಸೆಕ್ಸ್ ಸರಿಯೇ?’ ಪಾಕಿಸ್ತಾನದ ಸಿ ಒ ಎಮ್ ಎಸ್ ಎ ಟಿ ಎಸ್ COMSATS(Commission on Science and Technology for Sustainable Development in the South) ವಿಶ್ವವಿದ್ಯಾಲಯದ ಪರೀಕ್ಷಾ ಪ್ರಶ್ನೆಪತ್ರಿಕೆಯ ಈ ಸಾಲುಗಳನ್ನು ಎಲ್ಲೆಡೆ ವಿವಾದ ಹುಟ್ಟುಹಾಕಿದೆ. ಇಸ್ಲಾಮಾಬಾದ್ ಮೂಲದ COMSATS ವಿಶ್ವವಿದ್ಯಾನಿಲಯವು ಸಹೋದರ ಮತ್ತು ಸಹೋದರಿಯ ನಡುವಿನ ಲೈಂಗಿಕತೆಯ ಬಗ್ಗೆ ಪರೀಕ್ಷಾ ಪ್ರಶ್ನೆ ಪತ್ರಿಕೆಯೊಂದರಲ್ಲಿ ಕೇಳಿದ್ದ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ವಿವಾದವನ್ನು ಹುಟ್ಟುಹಾಕಿದೆ.
ಇದು ಒಳ್ಳೆಯ ಅಥವಾ ಕೆಟ್ಟ ನಿರ್ಧಾರವೇ ಎಂಬುದರ ಕುರಿತು ತಮ್ಮ ಅಭಿಪ್ರಾಯವನ್ನು ಬರೆಯಲು ಪ್ಯಾಸೇಜ್ ರೂಪದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲಾಗಿದೆ. ಇದರ ಜೊತೆಗೆ ಆ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಳ್ಳಲು ವಿದ್ಯಾರ್ಥಿಗಳನ್ನು ಕೇಳಲಾಗಿದೆ. ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗುತ್ತಿದ್ದಂತೆಯೇ ನೆಟ್ಟಿಗರು ವಿಶ್ವವಿದ್ಯಾನಿಲಯವನ್ನು ಟೀಕಿಸಿದ್ದರಿಂದ ಈ ಘಟನೆ ಭಾರೀ ಕೋಲಾಹಲ ಸೃಷ್ಟಿಸಿತ್ತು.
ವಿವಾದದ ನಂತರ, ವಿವಾದಾತ್ಮಕ ಪ್ರಶ್ನೆಯನ್ನು ರೂಪಿಸಿದ ಶಿಕ್ಷಕರನ್ನು ವಿಶ್ವವಿದ್ಯಾಲಯವು ವಜಾಗೊಳಿಸಿದೆ. ಪಾಕ್ ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಈ ಬಗ್ಗೆ ಪತ್ರ ಬರೆದಿದ್ದು, “ಗೌರವಾನ್ವಿತ ಫೆಡರಲ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಇಸ್ಲಾಮಾಬಾದ್ನ COMSATS ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ಪದವಿಯ ಇಂಗ್ಲಿಷ್ ವಿಷಯದ ಪ್ರಶ್ನೆಪತ್ರಿಕೆಯ ವಿವಾದವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದ, ಪ್ರಶ್ನೆಯ ವಿಷಯವು ಆಕ್ಷೇಪಾರ್ಹವಾಗಿದೆ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಪಠ್ಯಕ್ರಮದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಮತ್ತು ವಿದ್ಯಾರ್ಥಿಗಳ ಕುಟುಂಬಗಳಲ್ಲಿ ಅಶಾಂತಿಯನ್ನು ಉಂಟುಮಾಡಿದೆ.” ಎಂದಿದ್ದಾರೆ.
ನಂತರ ಸಚಿವಾಲಯವು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮತ್ತು ಈ ಆಕ್ಷೇಪಾರ್ಹ ವಿಷಯಗಳ ಬಗ್ಗೆ ತನಿಖೆ ನಡೆಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು. 2023 ರ ಜನವರಿ 5 ರಿಂದ ಅನ್ವಯವಾಗುವಂತೆ ಉಪನ್ಯಾಸಕರನ್ನು ವಜಾಗೊಳಿಸಲಾಗಿದೆ ಮತ್ತು ಆತನನ್ನು ವಿಶ್ವವಿದ್ಯಾನಿಲಯದಿಂದ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ವಿಶ್ವವಿದ್ಯಾಲಯವು ಸಚಿವಾಲಯಕ್ಕೆ ತಿಳಿಸಿದೆ.