ನ್ಯೂಸ್ನಾಟೌಟ್: ಮಹಿಳೆಯ ಧ್ವನಿಯನ್ನುಅನುಕರಣೆ ಮಾಡಿ ಫೋನ್ ಮೂಲಕ ಬ್ಲ್ಯಾಕ್ಮೇಲ್ ಮಾಡಿ ಹಣ ಪೀಕಿಸುತ್ತಿದ್ದ ಆರೋಪಿ ಮೂಡುಬಿದಿರೆ ಸಮೀಪದ ಬಿರಾವು ಧನಂಜಯ ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಬೈಕಂಪಾಡಿಯ ಕಂಪೆನಿಯೊಂದರ ಉದ್ಯೋಗಿ ಹೊಸಬೆಟ್ಟು ನಿವಾಸಿಯೊಬ್ಬರಿಗೆ ಉಷಾ ಎಂದು ಪರಿಚಯಿಸಿಕೊಂಡು ಹೆಣ್ಣಿನ ಧ್ವನಿಯಲ್ಲಿ ಕರೆ, ವಿಡಿಯೋ ಕಾಲ್ ಮಾಡಿ, ಯಾವುದೋ ಹುಡುಗಿಯ ಖಾಸಗಿ ಅಂಗಗಳನ್ನು ತೋರಿಸಿ ಯಾಮಾರಿಸಿದ್ದ. ಬಳಿಕ 25 ಸಾವಿರ ರೂಪಾಯಿ ಕೊಡಬೇಕು, ಇಲ್ಲವಾದಲ್ಲಿ ಈ ವಿಡಿಯೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದ. ಕಂಗಾಲಾಗಿ ಸಂತ್ರಸ್ತರು ಒಮ್ಮೆ 2 ಸಾವಿರ ಗೂಗಲ್ ಪೇ ಮಾಡಿದ್ದರು. ಬಳಿಕ ಪದೇ ಪದೆ ಹಣಕ್ಕಾಗಿ ಪೀಡಿಸುತ್ತಿದ್ದ ಧನಂಜಯನ ಕಿರುಕುಳ ತಾಳಲಾರದೆ ಕೊನೆಗೆ ಸುರತ್ಕಲ್ ಠಾಣೆಗೆ ದೂರುನೀಡಿದರು. ಬಳಿಕ ಕಾರ್ಯಾಚರಣೆ ನಡೆಸಿದಾಗ ಧನಂಜಯನ ಅಸಲಿ ಮುಖ ಬಯಲಾಗಿದೆ. ಆರೋಪಿಯನ್ನುವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.