ನ್ಯೂಸ್ ನಾಟೌಟ್: ಅಂಗಡಿ ಎದುರುಗಡೆ ನಿಲ್ಲಿಸಿದ್ದ ಸ್ಕೂಟಿಯನ್ನು ವಿದ್ಯಾರ್ಥಿಗಳು ಕೊಂಡೊಯ್ದ ಘಟನೆ ಸುಳ್ಯದ ಶ್ರೀರಾಂ ಪೇಟೆಯಲ್ಲಿ ನಡೆದಿದೆ.
ಸುಳ್ಯದ ಶ್ರೀರಾಂ ಪೇಟೆಯ ಮೆಡಿಕಲೊಂದರ ಮುಂಭಾಗ ಫ್ರೂಟ್ ಅಂಡ್ ಜ್ಯೂಸ್ ಅಂಗಡಿಯ ಮಾಲಕ ರಫೀಕ್ ಎಂಬುವವರು ತಮ್ಮ ವಾಹನವನ್ನು ಪಾರ್ಕ್ ಮಾಡಿದ್ದರು. ಬೆಳಗ್ಗೆ 11:30ರ ಸಮಯದಲ್ಲಿ ವಿದ್ಯಾರ್ಥಿಗಳು ಸ್ಕೂಟಿಯನ್ನು ತೆಗೆದು ಕೊಂಡು ಹೋಗುವುದನ್ನು ಗಮನಿಸಿದ ಸ್ಥಳೀಯ ಅಂಗಡಿ ಮಾಲಿಕ ಓಡಿ ಬಂದು ರಫೀಕ್ ಗೆ ತಿಳಿಸಿದರು. ತಕ್ಷಣ ಆತಂಕಗೊಂಡು ಪಕ್ಕದ ಅಂಗಡಿಯ ಸಿಸಿ ಟಿವಿ ಪರಿಶೀಲಿಸಿದಾಗ ವಿದ್ಯಾರ್ಥಿಗಳಂತೆ ಕಾಣುತ್ತಿರುವ ನಾಲ್ಕು ಮಂದಿ ಯುವಕರು ಸ್ಕೂಟಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗುವ ದೃಶ್ಯ ಕಂಡುಬಂದಿದೆ.
ಸುಳ್ಯದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ವಾಹನವನ್ನು ಅದಲು ಬದಲು ಮಾಡಿಕೊಂಡ ಮಾಹಿತಿ ತಿಳಿದು ಬಂದಿದೆ.ವಿದ್ಯಾರ್ಥಿಗಳು ತಮ್ಮ ಆಕ್ಟಿವಾ 6gಯಲ್ಲಿ ಶ್ರೀರಾಂ ಪೇಟೆಯ ಕರ್ನಾಟಕ ಬ್ಯಾಂಕ್ಗೆ ತಮ್ಮ ಸ್ನೇಹಿತರೊಂದಿಗೆ ಬಂದಿದ್ದರು. ಬ್ಯಾಂಕ್ನ ಕೆಲಸ ಮುಗಿಸಿ ಕಾಲೇಜಿಗೆ ತಡವಾಯಿತೆಂದು ಗಡಿಬಿಡಿಯಲ್ಲಿ ತನ್ನದೇ ಸ್ಕೂಟರ್ ಹೋಲಿಕೆ ಇರುವ ರಫೀಕ್ ಅವರ ಸ್ಕೂಟರ್ ಗೆ ಕೀ ಹಾಕಿದಾಗ ಸ್ಟಾರ್ಟ್ ಆಗಲ್ಲಿಲ್ಲ. ಇದರಿಂದ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಗಾಡಿಯನ್ನು ತಳ್ಳಿ ಹತ್ತಿರದ ಗ್ಯಾರೆಜ್ ಗೆ ಕೊಂಡೊಯ್ದಿದ್ದಾರೆ. ಗ್ಯಾರೆಜ್ ನಲ್ಲಿ ಪರಿಶೀಲಿಸಿ ಶೀಟ್ ಒಪನ್ ಮಾಡಿದಾಗ ಬಾಕ್ಸ್ನಲ್ಲಿ ಆರ್ ಸಿ ಬೇರೆಯವರದು ಎಂದು ತಿಳಿದುಬಂದಿದೆ. ಕೂಡಲೇ ವಿದ್ಯಾರ್ಥಿಗಳು ಸ್ಕೂಟಿ ನಿಲ್ಲಿಸಿದ ಸ್ಥಳಕ್ಕೆ ಬಂದು ರಫೀಕ್ಗೆ ವಿಷಯ ತಿಳಿಸಿ,ಅವರ ಸ್ಕೂಟಿಯಲ್ಲಿ ಪ್ರಯಾಣ ಬೆಳೆಸಿದರು.