ನ್ಯೂಸ್ನಾಟೌಟ್: ಹಿರಿಯ ಕವಿ, ನಾಟಕಕಾರ, ಯಕ್ಷಗಾನ ಅರ್ಥಧಾರಿ, ಪ್ರಸಂಗಕರ್ತ, ಅಂಕಣಕಾರ ಅಂಬಾತನಯ ಮುದ್ರಾಡಿ (85) ಅಸೌಖ್ಯದಿಂದ ಇಂದು ಮುದ್ರಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ಮೂವರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಅವರ ಮೂಲ ಹೆಸರು ಕೇಶವ ಶೆಟ್ಟಿಗಾರ್. ಆದರೆ ಅಂಬಾತನಯ ಮುದ್ರಾಡಿ ಎಂದೇ ಪ್ರಸಿದ್ಧರಾಗಿದ್ದರು. 1935ರ ಜೂನ್ 4ರಂದು ಜನಿಸಿದ್ದ ಇವರು ಓದಿದ್ದು ಕೇವಲ 8ನೇ ತರಗತಿಯಾದರೂ ಅವರ ಅಪಾರ ಜ್ಞಾನದಿಂದ ಮೂತ್ತಾರು ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿ 1993ರಲ್ಲಿ ಪಡೆದಿದ್ದರು.
ಅಂಬಾತನಯ ಮುದ್ರಾಡಿ ಅವರ ಸಾಧನೆ ಪರಿಗಣಿಸಿ ಯಾದವರಾವ್ ಪ್ರಶಸ್ತಿ, ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ಸೀತಾನದಿ ಗಣಪಯ್ಯ ಪ್ರಶಸ್ತಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ನಿಂಜೂರು ಪ್ರಶಸ್ತಿ, ಮುಟ್ಟ ಗೋವರ್ಧನ ರಾವ್ ಪ್ರಶಸ್ತಿ, ಮುಂಬಯಿ ಪದವೀಧರ ಯಕ್ಷಗಾನ ಪ್ರಶಸ್ತಿ, ಪೊಳಲಿ ಶಾಸ್ತ್ರೀ ಪ್ರಶಸ್ತಿ, ಕುಕ್ಕಿಲ ಕೃಷ್ಣ ಭಟ್ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮ ವಿಠಲ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.