ನ್ಯೂಸ್ ನಾಟೌಟ್ : ಇಬ್ಬರು ಮಹಿಳಾ ಅಧಿಕಾರಿಗಳ ವಾರ್ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಆರೋಪ,ಪ್ರತ್ಯಾರೋಪಗಳ ಮೂಲಕ ಮಾತಿನ ಸಮರ ಮುಂದುವರಿದಿದೆ. ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಫೇಸ್ಬುಕ್ ಮೂಲಕ ಸಮರ ಸಾರಿದ್ದಾರೆ. ಪ್ರಶ್ನೆಗಳ ಸುರಿಮಳೆಗೈದಿದ್ದರು. ಬಳಿಕ ರೋಹಿಣಿ ಸಿಂಧೂರಿ ಅವರ ಕೆಲ ಫೋಟೋಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿ, ಸುದ್ದಿಗೋಷ್ಠಿ ನಡೆಸಿದ್ದರು.
ಐಪಿಎಸ್ ಅಧಿಕಾರಿಯಾಗಿರುವ ಡಿ. ರೂಪಾ ಅವರು ಮಾಡಿರುವ ಸಾಲು ಸಾಲು ಆರೋಪಗಳಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಿರುಗೇಟು ನೀಡಿದ್ದು, ರೂಪಾ ಅವರಿಗೆ ಮಾನಸಿಕ ಕಾಯಿಲೆ ಎಂದಿದ್ದರು.ಈ ಮೂಲಕ ಸ್ಪಷ್ಟನೆಯನ್ನು ಕೊಟ್ಟಿದ್ದರು.
ರೂಪ ಮೌದ್ಗಿಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರೋಹಿಣಿ ಸಿಂಧೂರಿ ಅವರಿಗೆ ಆರಂಭದಲ್ಲಿ ನಾನು ಸಾಕಷ್ಟು ಸಹಾಯ ಮಾಡಿದ್ದೇನೆ. ಡಿ.ಕೆ.ರವಿ ಆತ್ಮಹತ್ಯೆಯ ವಿಚಾರ ಬಂದಾಗಲೇ ರೋಹಿಣಿ ಸಿಂಧೂರಿ ಎಡವಿದ್ದರು. ಅವತ್ತೇ ನಾನು ಮಾತನಾಡಿದೆ ಎಂದು ಹೇಳಿದ್ದರು.ಇದರ ಬೆನ್ನಲ್ಲೇ ಈ ವಿಚಾರಕ್ಕೆ ಸಂಬಂಧಿಸಿದ್ದಂತೆ ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ಟ್ವೀಟ್ ಮಾಡಿರುವುದು ಪ್ರಕರಣ ತಿರುವು ಪಡೆದುಕೊಂಡಿದೆ.
ಇದರ ಬೆನ್ನಲ್ಲೇ ಡಿ.ಕೆ.ರವಿ ಪತ್ನಿ ಕಾಂಗ್ರೆಸ್ ನಾಯಕಿ ಟ್ವಿಟರ್ ನಲ್ಲಿ “Karma will get back to you,sooner or later it surely will” ಎಂದು ಬರೆದುಕೊಂಡಿದ್ದಾರೆ. ತಾನು ಮಾಡಿರುವ ಪಾಪ ತನಗೆ ವಾಪಸ್ಸು ಹಿಂತಿರುಗುತ್ತದೆ. ಅದು ತಕ್ಷಣಕ್ಕೆ ಅಥವಾ ತಡವಾಗಿ ಆಗಬಹುದು. ಪಾಪ ತಟ್ಟುವುದು ಮಾತ್ರ ಖಂಡಿತ ಎಂದು ರೋಹಿಣಿ ಸಿಂಧೂರಿಗೆ
ಟಾಂಗ್ ಕೊಟ್ಟಿರುವ ಟ್ವೀಟ್ ಇದೀಗ ಸುಡುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.ಕುಸಮಾ ಮಾಡಿರುವ ಟ್ವೀಟ್ ಗೆ ರೂಪ ಅವರು ಪ್ರತಿಕ್ರಿಯಿಸಿ, ಕುಸುಮಾ ನಿಮ್ಮ ನೋವು ನನಗೆ ಅರ್ಥ ಆಗುತ್ತದೆ ಎಂದು ರೀಟ್ವೀಟ್ ಮಾಡಿದ್ದಾರೆ.