ನ್ಯೂಸ್ ನಾಟೌಟ್ :ಇತ್ತೀಚೆಗೆ ಮದುಮಗಳೊಬ್ಬಳು ಮದುವೆ ಮನೆಯಿಂದ ತೆರಳಿ ಪರೀಕ್ಷೆ ಬರೆದ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.ಇದೀಗ ಹೆರಿಗೆಯಾಗಿ ಕೆಲವೇ ಗಂಟೆಗಳಲ್ಲಿ ಯುವತಿಯೊಬ್ಬಳು 10ನೇ ತರಗತಿ ಬೋರ್ಡ್ ಎಕ್ಸಾಂ ಬರೆದ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ.ಆ ಮೂಲಕ ಎಲ್ಲರು ಹುಬ್ಬೇರಿಸುವ ಸಾಹಸ ಮಾಡಿದ್ದಾಳೆ ಈ ಯುವತಿ.
ಹೆಸರು ರುಕ್ಮಿಣಿ. ವಯಸ್ಸು ೨೨. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ರುಕ್ಮಿಣಿ ಕುಮಾರಿ ಯುವತಿ ಗಣಿತ ಪರೀಕ್ಷೆ ಬರೆದ ಬಳಿಕ, ತನ್ನ ಮೆಚ್ಚಿನ ವಿಜ್ಞಾನ ಪರೀಕ್ಷೆಯನ್ನು ಬರೆಯಲು ಕುತೂಹಲದಿಂದ ಕಾಯುತ್ತಿದ್ದರು.ಆದರೆ ಒಂದು ಕಡೆಯಲ್ಲಿ ಗರ್ಭಿಣಿ.ಹೆರಿಗೆ ನೋವು ಕಾಣಿಸಿಕೊಂಡಿದೆ.ಹೊಟ್ಟೆಯಲ್ಲಿ ಮಗುವನ್ನಿಟ್ಟುಕೊಂಡು ಪರೀಕ್ಷೆಗೆ ಓದುತ್ತಿದ್ದ ಯುವತಿಗೆ, ಮುಂಜಾನೆ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ರುಕ್ಮಿಣಿ ಅವರನ್ನು ಕರೆದೊಯ್ಯಲಾಗಿತ್ತು.
ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ರುಕ್ಮಿಣೆ ಜನ್ಮ ನೀಡಿತ್ತಾರೆ.ಆದರೆ ವಿಜ್ಞಾನ ಪರೀಕ್ಷೆ ಮೇಲಿನ ಒಲವು ಹೋಗಲೇ ಇಲ್ಲ. ಹೇಗಾದರೂ ಮಾಡಿ ಪರೀಕ್ಷೆ ಬರೆಯಲೇ ಬೇಕೆಂದು ನಿರ್ಧಾರ ಮಾಡಿದರು. ಒಂದು ಕಡೆ ಮಗ ಬಂದ ಸಂತಸದಲ್ಲಿ ರುಕ್ಮಿಣಿ ಇದ್ದರೆ, ಮತ್ತೊಂದೆಡೆಯಲ್ಲಿ ವಿಜ್ಞಾನ ಪರೀಕ್ಷೆ ಬರೆಯಲಾಗುತ್ತಿಲ್ಲವಲ್ಲ ಎಂಬ ಸಂಕಟ ಕಾಡುತ್ತಿತ್ತು. ವಿಶ್ರಾಂತಿ ಮಾಡಿ ಎಂದು ವೈದ್ಯರು ಹೇಳಿದರೂ ರುಕ್ಮಿಣಿ ಇದನ್ನು ನಿರಾಕರಿಸಿ ತನ್ನಿಷ್ಟದ ವಿಜ್ಞಾನ ಪರೀಕ್ಷೆಗೆ ನಿಗದಿತ ಸಮಯಕ್ಕೆ ಹಾಜರಾದರು.
ಆಂಬ್ಯುಲೆನ್ಸ್ ನಲ್ಲಿ ತೆರಳಿ ಪರೀಕ್ಷೆ ಬರೆದಿದ್ದಾರೆ. ಮೂರು ಗಂಟೆ ಪರೀಕ್ಷೆ ಬರೆದು ಆಸ್ಪತ್ರೆಗೆ ವಾಪಾಸಾಗಿದ್ದಾರೆ . ನನ್ನ ಮಗ ದೊಡ್ಡವನಾದ ಮೇಲೆ ಆತ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಬೇಕು. ನಾನು ನನ್ನ ಮಗನಿಗೆ ಒಳ್ಳೆಯ ಉದಾಹರಣೆಯಾಗಬೇಕು. ನನ್ನ ಪರೀಕ್ಷೆ ಒಳ್ಳೆಯ ರೀತಿ ಸಾಗಿದೆ. ನಾನು ಉತ್ತಮ ಅಂಕ ಗಳಿಸಬಹುದು ಎಂದು ರುಕ್ಮಿಣಿ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.