ನ್ಯೂಸ್ ನಾಟೌಟ್ : ಹೆಚ್ಚಿನ ಜನರಿಗೆ ವಿದೇಶಗಳಲ್ಲಿ ಕೆಲಸ ಮಾಡಬೇಕೆನ್ನುವ ಕನಸು.ಅದರಲ್ಲೂ ಇನ್ನೂ ಕೆಲವರು ವಿದೇಶ ಪ್ರಯಾಣ ಬೆಳೆಸುವವರು ಇರುತ್ತಾರೆ. ಆದರೆ ಪ್ರಯಾಣ ಬೆಳೆಸುವವರು ಪಾಸ್ಪೋರ್ಟ್ ಹೊಂದಿರಲೇಬೇಕು. ಯಾವುದೇ ಸಂದರ್ಭದಲ್ಲೂ ಪಾಸ್ ಪೋರ್ಟ್ ಇಲ್ಲದೇ ವಿದೇಶಗಳಿಗೆ ತೆರಳಲು ಸಾಧ್ಯವಿಲ್ಲ.
ನೀವು ಪಾಸ್ ಪೋರ್ಟ್ ಇಲ್ಲ ಎನ್ನುವುದೇ ವಿದೇಶ ಯಾನಕ್ಕೆ ಅಡ್ಡಿಯಾಗುತ್ತಿದ್ದರೆ ನಿರಾಸೆಯಾಗಬೇಕೆಂದಿಲ್ಲ. ಪಾಸ್ಪೋರ್ಟ್ ಪಡೆಯಲು ಇಚ್ಛಿಸುವವರಿಗೆ ಗುಡ್ ನ್ಯೂಸ್ ಇದಾಗಿದೆ. ಇದೀಗ ವಿದೇಶ ಪ್ರಯಾಣ ಬೆಳೆಸುವವರಿಗೆ ಪಾಸ್ಪೋರ್ಟ್ ಪರಿಶೀಲನೆ ಸೌಲಭ್ಯ ಸಂಪೂರ್ಣ ಅಟೋಮ್ಯಾಟಿಕ್ ಆಗಿದೆ. ಹೀಗಾಗಿ ಇನ್ನು ಪಾಸ್ ಪೋರ್ಟ್ ಗಾಗಿ 15 ದಿನಗಳವರೆಗೆ ಕಾಯುವ ಅಗತ್ಯವಿಲ್ಲ. ಕೇವಲ 5 ದಿನಗಳಲ್ಲಿ ಪಾಸ್ಪೋರ್ಟ್ ನಿಮ್ಮ ಕೈ ಸೇರಲಿದೆ.
ಪಾಸ್ಪೋರ್ಟ್ ಮಾಡಿಸುವ ವಿಧಾನ ಹೇಗೆ?
ಪಾಸ್ಪೋರ್ಟ್ ಮಾಡಲು ಇಚ್ಛಿಸುವವರು ಭಾರತೀಯ ಪ್ರಜೆಯಾಗಿರಬೇಕು. ಪಾಸ್ಪೋರ್ಟ್ ಮಾಡುವವರು ಭಾರತದ ಪೌರತ್ವವನ್ನು ಪಡೆದಿರಬೇಕು. ಇದೀಗ ವ್ಯಕ್ತಿಯು ಪಾಸ್ಪೋರ್ಟ್ ಮಾಡಿಸಬೇಕಾದರೆ ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.
ಪಾಸ್ಪೋರ್ಟ್ ಮಾಡುವವರು ಈ ಕೆಳಗಿನ ಹಂತಗಳನ್ನು ಅನುಸರಿಸಿ :
ಮೊದಲು ಪಾಸ್ಪೋರ್ಟ್ ಸೇವಾ ಆನ್ಲೈನ್ ಪೋರ್ಟಲ್ ನಲ್ಲಿ ನೋಂದಾಯಿಸಬೇಕು.
ನಂತರ Passport Seva Online Portalನಲ್ಲಿ ಲಾಗಿನ್ ಆಗಬೇಕು.
Apply for Background varification for GEP ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಇದರ ನಂತರ ಫಾರ್ಮ್ನಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ, ಸಬ್ಮಿಟ್ ಮಾಡಬೇಕು.
ಈಗ Pay And Schedule Appointment ಲಿಂಕ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
ಇಲ್ಲಿ ಯಾವ ಸ್ಥಳದ Appointment ಬೇಕೋ ಆ ಸ್ಥಳವನ್ನು ಆರಿಸಿಕೊಳ್ಳಬೇಕು.
ಅಪಾಯಿಂಟ್ ಮೆಂಟ್ ಬುಕ್ ಮಾಡಲು ಆನ್ಲೈನ್ ಪೇಮೆಂಟ್ ಮಾಡಬೇಕು.
ಇದರ ನಂತರ, Print Application Receipt ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈಗ ಪ್ರಿಂಟರ್ ನಿಂದ ಅಪ್ಲಿಕೇಶನ್ನ ಪ್ರಿಂಟ್ ಹೊರಬರುತ್ತದೆ. ನಿಮ್ಮ ಮೊಬೈಲ್ನಲ್ಲಿ ಅಪಾಯಿಂಟ್ ಮೆಂಟ್ ಸಂದೇಶವೂ ಬರುತ್ತದೆ. ಅದನ್ನು ಸೇವ್ ಮಾಡಿಕೊಳ್ಳಬೇಕು.
ಪಾಸ್ಪೋರ್ಟ್ ಪರಿಶೀಲನೆಯ ಸೌಲಭ್ಯವು ಸಂಪೂರ್ಣವಾಗಿ ಆನ್ಲೈನ್ ಆಗಿದ್ದರೆ, ನಂತರ ದೈಹಿಕವಾಗಿ ಪೊಲೀಸ್ ಪರಿಶೀಲನೆ ಮಾಡಿಸಿಕೊಳ್ಳುವ ಅಗತ್ಯವಿರುವುದಿಲ್ಲ.