ನ್ಯೂಸ್ ನಾಟೌಟ್ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಬೆಂಗಳೂರು ನೆಡಸಿದ ಇನ್ಸ್ಟಿಟ್ಯೂಶನ್ ಮೆಡಿಕಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಪರೀಕ್ಷೆಯಲ್ಲಿ ಕೆ.ವಿ.ಜಿ. ಸಂಸ್ಥೆಯ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿ ಸಂಸ್ಥೆ 100% ಫಲಿತಾಂಶ ತಂದು ಕೊಟ್ಟಿದ್ದಾರೆ.
ಡಿಸೆಂಬರ್ 2022 ರ ಸಾಲಿನಲ್ಲಿ ನಡೆಸಿದ ಅಲೈಡ್ ಹೆಲ್ತ್ ಸೈನ್ಸಸ್ ದ್ವಿತೀಯ ಬಿ.ಎಸ್ಸಿ. ಮತ್ತು ಅಂತಿಮ ಬಿ.ಎಸ್ಸಿ ಪದವಿ ಪರೀಕ್ಷೆಯಲ್ಲಿ ಕೆ.ವಿ.ಜಿ ಇನ್ಸ್ಟಿಟ್ಯೂಶನ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ದ್ವಿತೀಯ ಬಿ.ಎಸ್ಸಿ .ಮೆಡಿಕಲ್ ಲ್ಯಾಬೋರೆಟರಿ ಟೆಕ್ನಾಲಜಿ ವಿಭಾಗದ ಭೂಮಿಕಾ ಕೆ (83%) ಮತ್ತು ಕದಿಜತ್ ಸೆಮೀರಾ (80%) , ದ್ವಿತೀಯ ಬಿ. ಎಸ್ಸಿ ಎಮರ್ಜೆನ್ಸಿ ಮೆಡಿಸಿನ್ ಮತ್ತು ಟ್ರಾಮ ಕೇರ್ ಟೆಕ್ನಾಲಜಿ ವಿಭಾಗದ ಅರ್ಚನ ಎನ್.ಕೆ (76%) ,ತೃತೀಯ ಬಿ.ಎಸ್ಸಿ. ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ವಿಭಾಗದ ಆಸಿಫ್ ಆಲಿ (75%) ನಲ್ಲಿ ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ. ಕಾಲೇಜಿಗೆ 100% ನ ದಾಖಲೆಯನ್ನು ಮಾಡಿದ್ದಾರೆ .ಕಾಲೇಜಿನ ಆಡಳಿತ ಮಂಡಳಿ ಡೀನ್ ,ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ.