ನ್ಯೂಸ್ ನಾಟೌಟ್: ಟರ್ಕಿಯಲ್ಲಿ ಭೂಕಂಪ ಸಂಭವಿಸಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಹುಮಹಡಿ ಕಟ್ಟಡಗಳೆಲ್ಲವು ನೆಲಕ್ಕುರುಳಿವೆ. ಸಾವಿರಾರು ಮಂದಿ ನಿರ್ಗತಿಕರಾಗಿದ್ದಾರೆ. ಈ ಬೆನ್ನಲ್ಲೇ ಇದೀಗ ಭಾರತದಲ್ಲೂ ಇದೇ ಮಾದರಿಯ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದ ಐದು ನಗರಗಳಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಇದೆ. ಚೆನ್ನೈ, ಮುಂಬೈ, ದೆಹಲಿ, ಗುವಾಹಟಿ, ಶ್ರೀನಗರ ಭೂಕಂಪಕ್ಕೆ ತುತ್ತಾಗಬಹುದು ಅನ್ನಬಹುದು. ಈ ನಗರಗಳು ಡೇಂಜರ್ ಝೋನ್ನಲ್ಲಿವೆ ಅನ್ನುವುದನ್ನು ಸ್ವತಃ ವಿಜ್ಞಾನಿಗಳೇ ಹೇಳುತ್ತಿದ್ದಾರೆ.
ಚೆನ್ನೈ ಹಾಗೂ ಬೆಂಗಳೂರು ನಡುವೆ ಕೇವಲ 380 ಕಿ.ಮೀ. ವ್ಯತ್ಯಾಸ ಇದೆ. ಹೀಗಾಗಿ ಚೆನ್ನೈಗೆ ಒಂದು ವೇಳೆ ಭೂಕಂಪ ಸಂಭವಿಸಿದರೆ ಬೆಂಗಳೂರಿಗೂ ಅದರ ಎಫೆಕ್ಟ್ ಎದುರಾಗಬಹುದು ಅನ್ನಲಾಗಿದೆ. ಈ ಬಗ್ಗೆ ಭೂಗರ್ಭ ಶಾಸ್ತ್ರಜ್ಞ ಡಾ.ಬಿ.ಸಿ.ಪ್ರಭಾಕರ್ ಹಲವು ಮಾಹಿತಿಗಳನ್ನು ಖಾಸಗಿ ಟೀವಿ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.