ನ್ಯೂಸ್ ನಾಟೌಟ್: ಸುಳ್ಯ ಕೆ.ವಿ.ಜಿ. ಅಮರಜ್ಯೋತಿ ಪಿಯು ಕಾಲೇಜಿನಲ್ಲಿ 2023-24ನೇ ಸಾಲಿನ ಆನ್ಲೈನ್ ಪರೀಕ್ಷೆಯ ಸ್ಕಾಲರ್ಶಿಪ್ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.
ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಸುಳ್ಯದ ಸಂತ ಜೋಸೆಫ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ವಿದ್ಯಾರ್ಥಿಗಳಾದ ಶಿಬಾ ಆಸ್ಪಿಯಾ ಮತ್ತು ನೇಹಾ ಕೆ., ಆಲೆಟ್ಟಿಯ ರೋಟರಿ ಹೈಸ್ಕೂಲ್ನ ತುಷಾರ್ ಕಾರ್ತಿಕ್, ಕೆವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ತಾನ್ವಿ ಹಾಗೂ ಖುಷಿ ಬ್ಲೆಸ್ಡ್ ಕುರಿಯಾಕೋಸ್, ವಾಣಿಜ್ಯ ವಿಭಾಗದಲ್ಲಿ ಸುಳ್ಯ ಸಂತ ಜೋಸೆಫ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ಗಗನ್ ದೀಪ್ ಕೆ.ಎಸ್., ಮಹಮ್ಮದ್ ಲಾಜೀಮ್, ಫಾತಿಮತ್ ಅಪ್ರಾ, ಶ್ರೀರಾಮ ಟ್ರಸ್ಟ್ನ ಆರ್ಯ ಪಿ.ಡಿ. ಹಾಗೂ ಕಲ್ಲುಗುಂಡಿಯ ಸವೇರಪುರ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ರೋಷ್ನಿ ಇವರು ಆಯ್ಕೆಯಾಗಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಆಯೋಜಿಸಿದ್ದ ಕೆ.ವಿ.ಜಿ. ಸ್ಕಾಲರ್ಶಿಪ್ ಆನ್ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟ್, ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಡಾ .ರೇಣುಕಾಪ್ರಸಾದ್ ಕೆ.ವಿ. ಕಾಲೇಜಿನ ಸಿ.ಇ.ಒ ಡಾ. ಉಜ್ವಲ್ ಯು.ಜೆ. ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಯಶೋದಾ ರಾಮಚಂದ್ರ, ಉಪನ್ಯಾಸಕರು ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.