ನ್ಯೂಸ್ ನಾಟೌಟ್: ಅಧುನಿಕ ಪ್ರಪಂಚದಲ್ಲಿ ಒಂದಲ್ಲ ಒಂದು ಅಭಿವೃದ್ಧಿಗಳು ಆಗುತ್ತಲೆ ಇದೆ. ಇದೀಗ ದೇಶದ ಮೊಟ್ಟ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಅನಾವರಣಗೊಂಡಿದೆ. ಭಾರತದ ಜಿ-20 ಅಧ್ಯಕ್ಷತೆಯ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಭಾರತೀಯ ಇಂಧನ ಸಪ್ತಾಹ-2023ಗೆ (ಇಂಡಿಯ ಎನಾರ್ಜಿ ವೀಕ್) ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಇದೀಗ ದೇಶದ ಎಲ್ಲಾ ಜನತೆಗೆ ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ನ ಪರಿಚಯ ಮಾಡಿಸಲು ಸರ್ಕಾರ ಮುಂದಾಗಿದೆ. ಈ ಎಲೆಕ್ಟ್ರಿಕ್ ಟಿಪ್ಪರ್ 250 ಕಿ.ಮೀ ದೂರ ವ್ಯಾಪ್ತಿಯನ್ನು ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಎರಡು ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗುತ್ತದೆ ಹಾಗು ಸ್ಟ್ಯಾಂಡರ್ಡ್ 16 ಕ್ಯೂಬಿಕ್ ಮೀಟರ್ ಲೋಡ್ ಬಾಡಿಯನ್ನು ಹೊಂದಿದೆ.
ಇದರಲ್ಲಿ ಹಲವು ಬಗೆಯ ವಿನ್ಯಾಸಗಳನ್ನು ಮಾಡಲಾಗಿದ್ದು, ಈ ವಾಹನವು 28,000ಕೆಜಿ ತೂಕವಿದೆ. ಟಿಪ್ಪರ್ ನ ಹಿಮ್ಮುಖ ಬಾಗುವ ಸಾಮರ್ಥ್ಯ (ಟಿಪ್ಪಿಂಗ್ ಕೋನ) ಗರಿಷ್ಟ 46 ಡಿಗ್ರಿ, ಗರಿಷ್ಟ ಗ್ರೇಡಬಿಲಿಟಿ 25% , ಗರಿಷ್ಠ ಟಾರ್ಕ್ 2400 ಎನ್ ಎಮ್ ಮತ್ತು 6 x 4 ಆಕ್ಸಲ್ ಕಾನ್ಫಗರೇಶನ್ ಹೊಂದಿದೆ. ಇದು ಸಾರಿಗೆ ಉದ್ಯಮದ ಗೇಮ್ ಚೇಂಜರ್ ಆಗಲಿದೆ ಎಂದು ಎಂಇಐಎಲ್ ಕಂಪನಿ ಭರವಸೆ ವ್ಯಕ್ತಪಡಿಸಿದೆ.
ಈಗಾಗಲೇ ತನ್ನ ಸಾಧನೆಯನ್ನು ಮೆರೆಯುತ್ತಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್) ಸಾರಿಗೆ, ಇಂಧನ, ಉತ್ಪಾದನಾ ಕ್ಷೇತ್ರ ಸೇರಿದಂತೆ ಹಲವು ದೇಶಿಯ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ತನ್ನ ಅಂಗ ಸಂಸ್ಥೆಗಳಾದ ಡ್ರಿಲ್ಮೆಕ್ ಎಸ್ಪಿಎ, ಪೆಟ್ರೆವೆನ್ ಎಸ್ಪಿಎ, ಮೇಘಾ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಪ್ರೈವೇಟ್ ಲಿಮಿಟೆಡ್ (ಎಂಸಿಜಿಡಿಪಿಎಲ್), ಒಲೆಕ್ಟ್ರಾ, ಗ್ರೀನ್ಟೆಕ್ ಲಿಮಿಟೆಡ್ ಮತ್ತು ಐಕಾಮ್ ಟೆಲಿ ಲಿಮಿಟೆಡ್ ಸಂಸ್ಥೆಗಳು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಿ ಕೈಜೋಡಿಸಿದ್ದಾರೆ.
ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್):
ಎಂಇಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ. ವಿ. ಕೃಷ್ಣಾರೆಡ್ಡಿ, ಹೈಡ್ರೋಕಾರ್ಬನ್ ವಿಭಾಗದ ನಿರ್ದೇಶಕ ದೋರಯ್ಯ ಮತ್ತು ಇತರ ಉನ್ನತ ನಿರ್ವಹಣಾ ಸದಸ್ಯರು ಭಾರತದ ಮೊದಲ ಇಂಧನ ಪುದರ್ಶನ ಮತ್ತು ಸಮ್ಮೇಳನದಲ್ಲಿ ಭಾಗವಹಿದ್ದಾರೆ, ಜೊತೆಗೆ ತೈಲ ಮತ್ತು ಅನಿಲ, ನಗರ ಅನಿಲ ವಿತರಣೆ, ಎಲೆಕ್ಟ್ರಿಕ್ ವಾಹನ ಉತ್ಪಾದನೆ, ವಿದ್ಯುತ್, ನವೀಕರಿಸಬಹುದಾದ ಇಂಧನ ಸೇರಿದಂತೆ ವಿವಿಧ ಇಂಧನ ಕ್ಷೇತ್ರಗಳಲ್ಲಿ ಬಲವಾದ ಹಿಡಿತವನ್ನು ಹೊಂದಿದೆ. ಈ ಬಗ್ಗೆ ದೇಶ-ವಿದೇಶಗಳ ರಾಯಭಾರಿಗಳೊಂದಿಗೆ ಸಮಾಲೋಚನೆ ಕೂಡ ನಡೆಸಲಾಗಿದೆ.
ಎಂಇಐಎಲ್ನ ಹೈಡೋಕಾರ್ಬನ್ ವಿಭಾಗದ ನಿರ್ದೇಶಕ ದೋರಯ್ಯ, “ಇಂದಿನ ಇಂಧನ ಕ್ಷೇತ್ರವು ಸ್ಪರ್ಧಾತ್ಮಕ ಮತ್ತು ಸವಾಲಿನಿಂದ ಕೂಡಿದೆ. ಇಂದಿನ ಅಗತ್ಯಗಳನ್ನು ಪೂರೈಸಲು ಮತ್ತು 2070ರ ವೇಳೆಗೆ ಹೊರ ಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವ ಪುಧಾನಿ ಮೋದಿಯವರ ಪುತಿಜ್ಞೆ ಮತ್ತು ಅಮೃತ್ ಕಾಲ್ ಎಂಬಂತಹ ಅವರ ಹಲವು ದೃಷ್ಟಿಕೋನಗಳ ಮೇಲೆ ಕೆಲಸ ಮಾಡಲು ಈ ಸಮ್ಮೇಳನವು ಉತ್ತಮ ವೇದಿಕೆಯಾಗಿದೆ” ಎಂದು ಹೇಳಿದರು.
ಕಡಿಮೆ ಇಂಗಾಲದ ಆರ್ಥಿಕತೆಯಲ್ಲಿ ಎಂಇಐಎಲ್ನ ಪಾತ್ರವು ಹಿರಿದಾಗಿದೆ. ಮೇಘಾ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಪ್ರೈವೇಟ್ ಲಿಮಿಟೆಡ್ (ಎಂಸಿಜಿಡಿಪಿಎಲ್) ನಗರ ಅನಿಲ ವಿತರಣಾ ವ್ಯವಸ್ಥೆಯ ಮೂಲಕ 80 ಸಿಎನ್ಜಿ ಕೇಂದ್ರಗಳನ್ನು ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಸಿಜಿಡಿ ಕಂಪನಿಯಾಗಿ ಗುರಿತಿಸಿದೆ. ಇದರ ಜೊತೆಗೆ ಈ ಕಂಪನಿಗಳು ದೃಢವಾದ ಮೂಲಸೌಕರ್ಯದ ಮೂಲಕ ಇಂಧನ ಸುರಕ್ಷತೆಯನ್ನು ಖಚಿತಪಡಿಸುತ್ತಿವೆ. ಇದು 22 ಭೌಗೋಳಿಕ ಪ್ರದೇಶಗಳಲ್ಲಿ ಮತ್ತು ಹತ್ತು ಭಾರತೀಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಭಾರತದ ಸುಮಾರು 10% ಪ್ರದೇಶ ಮತ್ತು ಅದರ ಜನಸಂಖ್ಯೆಯ ಸುಮಾರು 7% ದಷ್ಟು ಒಳಗೊಂಡಿದೆ.
‘ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್’ ನ ಎಲೆಕ್ಟ್ರಿಕ್ ಬಸ್ಸ್ ಗಳ ಸಮೂಹವು ಭಾರತದ 13 ರಾಜ್ಯಗಳಲ್ಲಿ ಈಗಾಗಲೇ ಸಂಚರಿಸುತ್ತಿವೆ. ಭಾರತದಾದ್ಯಂತ 90,000 ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ. ನವೀಕರಿಸಬಹುದಾದ ಇಂಧನ ವಲಯವಾದ ಎಂಇಐಎಲ್ ನ ಗುಜರಾತ್ನಲ್ಲಿ ಭಾರತದ ಮೊದಲ ಕಾಲುವೆ ಮೇಲಿನ ಸೌರ ಯೋಜನೆ ಸೇರಿದಂತೆ ಹಲವಾರು ಸೌರ ಯೋಜನೆಗಳನ್ನು ಕಾರ್ಯಗತಗೊಳಿಸಿದೆ, ಇದು ನೀರನ್ನು ಆವಿಯಾಗುವಿಕೆಯನ್ನು ಸಂರಕ್ಷಿಸುವ ವಿಶಿಷ್ಟ ಯೋಜನೆಯಾಗಿದೆ. ಇಂಧನ ಕ್ಷೇತ್ರದಲ್ಲಿ ಬಲವಾದ ಉಪಸ್ಥಿತಿಯು ದೇಶದ ಇಂಧನ ಬೇಡಿಕೆಗಳನ್ನು ಪೂರೈಸಲು ಅನುವು ಮಾಡಿಕೊಡುವ ಮಹತ್ವದ ಕಂಪನಿಗಳಲ್ಲಿ ಎಂಇಐಎಲ್ ಒಂದಾಗಿದೆ. ಇದು ಭಾರತದಲ್ಲಿ ಶುದ್ಧ ಇಂಧನ ಪರಿವರ್ತನೆಯನ್ನು ತ್ವರಿತಗೊಳಿಸಲು ಉತ್ತಮ ಇಂಧನ ವ್ಯವಸ್ಥೆಯನ್ನು ರಚಿಸುವ ಜವಾಬ್ದಾರಿಯನ್ನು ಹೊರುತ್ತಾ ಬಂದಿದೆ.