ನ್ಯೂಸ್ ನಾಟೌಟ್: ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗಿರುವ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ಉದ್ಘಾಟನೆಗೊಂಡಿದೆ.
ಮಾರಾಟ ಮಳಿಗೆಗಳ ಉದ್ಘಾಟನೆಯನ್ನು ಜೀವ ವೈವಿಧ್ಯ ಮಂಡಳಿ ರಾಜ್ಯ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮತ್ತು ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ನೆರವೇರಿಸಿದರು.
ಈ ವೇಳೆ ಮಾತನಾಡಿದ ನಾಪಂಡ ರವಿ ಕಾಳಪ್ಪ, ಸ್ತ್ರೀ ಶಕ್ತಿ ಸಂಜೀವಿನಿ ಗುಂಪುಗಳಿಗೆ ಸರ್ಕಾರದ ವತಿಯಿಂದ ಸಹಾಯಧನ ನೀಡುತ್ತಿದ್ದು, ಆರ್ಥಿಕ ಉತ್ತೇಜನ ಮತ್ತು ಅಭಿವೃದ್ಧಿಯಾಗಲಿದೆ. ಇದರಿಂದ ಕುಟುಂಬದ ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದರು.
ಜಿಲ್ಲೆಯಾದ್ಯಂತ ಮಹಿಳೆಯರ ಸ್ತೀ ಶಕ್ತಿ, ಸಂಜೀವಿನಿ ಸಂಘಗಳು ತಾವು ಬೆಳೆದಂತಹ ತರಕಾರಿ ಹಾಗೂ ವಿವಿಧ ಉತ್ಪನ್ನಗಳಿಗೆ ಮಾರಾಟ ಕಲ್ಪಿಸಲು ಕೊಡಗು ಜಿಲ್ಲಾ ಪಂಚಾಯತ್, ಕೌಶಲಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸಂಜೀವಿನಿ- ಡೇ ನಲ್ಮ್ ಯೋಜನೆಯಡಿ ಎರಡು ದಿನಗಳ ಕಾಲ ಮಾರಾಟ ಮೇಳ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಸದಸ್ಯರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.