ನ್ಯೂಸ್ ನಾಟೌಟ್: ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವಕೀಲೆ ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಪ್ರಮಾಣವಚನ ಸ್ವೀಕರಿಸಿದರು.
ವಿಕ್ಟೋರಿಯಾ ಗೌರಿ ಅವರ ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಅವರು ಮದ್ರಾಸ್ ಹೈಕೋರ್ಟ್ನ ಲೈಬ್ರರಿ ಕೊಠಡಿಯಲ್ಲಿ ಇತರ ನಾಲ್ವರೊಂದಿಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಗೊಂಡಿದ್ದಾರೆ.
ವಿಕ್ಟೋರಿಯಾ ಗೌರಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ ಎಂದು ವಕೀಲರ ಗುಂಪೊಂದು ಆರೋಪಿಸಿತ್ತು. 2018 ರಲ್ಲಿ ಆರ್ಎಸ್ಎಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿಕ್ಟೋರಿಯಾ ಗೌರಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಬಿಳಿಯ ಭಯೋತ್ಪಾದನೆ ಎಂಬ ಪದ ಬಳಕೆ ಮಾಡಿದ್ದು ವ್ಯಾಪಕ ಟೀಕೆಗೊಳಗಾಗಿತ್ತು ಎಂದು ವಕೀಲರ ಗುಂಪು ಆರೋಪಿಸಿ ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.