ನ್ಯೂಸ್ನಾಟೌಟ್: ಮಾಧ್ಯಮ ವರದಿಯ ಪ್ರಕಾರ, ಪರಿಹಾರ ಕಾರ್ಯಾಚರಣೆಗಾಗಿ ಟರ್ಕಿಗೆ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ವಿಮಾನಕ್ಕೆ ಪಾಕಿಸ್ತಾನ ತನ್ನ ವಾಯುಪ್ರದೇಶದ ಪ್ರವೇಶವನ್ನು ನಿರಾಕರಿಸಿದೆ. ಫೆಬ್ರವರಿ 6, 2023 ರಂದು, ಪಶ್ಚಿಮ ಏಷ್ಯಾದ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಭೂಕಂಪಗಳಲ್ಲಿ ಒಂದಾದ 7.9-ತೀವ್ರತೆಯ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾವು ಆಘಾತಕ್ಕೊಳಗಾಯಿತು.
ಈ ಕಾರಣದಿಂದ ಪರಿಹಾರ ಕಾರ್ಯಾಚರಣೆಯಲ್ಲಿ ಟರ್ಕಿಗೆ ಸಹಾಯ ಮಾಡಲು, NDRF ತಂಡಗಳ ಪ್ರಕಾರ ವೈದ್ಯಕೀಯ ಸಹಾಯಕ್ಕಾಗಿ ಕಳುಹಿಸುವುದಾಗಿ ಭಾರತ ಸರ್ಕಾರ ಭರವಸೆ ನೀಡಿದೆ. ಆ ಪ್ರಕಾರ ಭಾರತವು ತನ್ನ ಅತಿದೊಡ್ಡ ಸರಕು ಸಾಗಾಣಿಕಾ ವಿಮಾನವಾದ ಬೋಯಿಂಗ್ ನಿರ್ಮಿತ C-17 ಗ್ಲೋಬ್ಮಾಸ್ಟರ್ ನನ್ನು ಸೇವೆಯಲ್ಲಿ ನಿಯೋಜಿಸಿದೆ.
ಈ ವಿಮಾನಗಳಲ್ಲಿ ಆಧುನಿಕ ಡ್ರಿಲ್ಲಿಂಗ್ ಉಪಕರಣಗಳು, ವೈದ್ಯರು ಮತ್ತು ರಕ್ಷಣಾ ಸೇವೆಯಲ್ಲಿ ಪಾಲ್ಗೊಳ್ಳಲು ರಕ್ಷಣಾ ತರಬೇತು ಪಡೆದ ನಾಯಿಗಳೊಂದಿಗೆ ಅದಾನ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಆದಾಗ್ಯೂ, ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನಿರಾಕರಿಸಿದ ಕಾರಣ ಭಾರತೀಯ ವಾಯು ಸೇನೆ ಮಾರ್ಗವನ್ನು ಬದಲಿಸಿಕೊಳ್ಳಬೇಕಾಯಿತು.
ಟರ್ಕಿಯಲ್ಲಿ ಎರಡು ದಿನಗಳಲ್ಲಿ 5 ಭೂಕಂಪಗಳು ಸಂಭವಿಸಿದವು, ಇದರ ಪರಿಣಾಮವಾಗಿ 4,800 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಹತ್ತಾರು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಮಂದಿ ಶಿಥಿಲಗೊಂಡ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಕಾರಣಗಳಿಂದ ಮಿಡಿದ ಭಾರತಕ್ಕೆ ಟರ್ಕಿ ಆಪದ್ಬಾಂಧವನೆಂದು ಕರೆದು ಧನ್ಯವಾದಗಳನ್ನು ತಿಳಿಸಿದೆ.
ರಾಷ್ಟ್ರಗಳಿಗೆ ಮಾನವೀಯ ನೆರವು ಕಳುಹಿಸುವುದಕ್ಕಾಗಿ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಪ್ರವೇಶಿಸದಂತೆ ಭಾರತೀಯ ವಿಮಾನವನ್ನು ನಿಲ್ಲಿಸಿರುವುದು ಇದೇ ಮೊದಲೇನಲ್ಲ. ಟರ್ಕಿ, ಉಕ್ರೇನ್, ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಇತರ ದೇಶಗಳಿಗೆ ಅಂದರೆ, ಪಶ್ಚಿಮದ ದೇಶಗಳನ್ನು ತಲುಪಲು ಭಾರತವು ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಹಾರಬೇಕಾಗಿದೆ.
2021 ರಲ್ಲಿ, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಭಾರತೀಯರನ್ನು ರಕ್ಷಿಸಲು ವಾಯು ಪ್ರಯಾಣಕ್ಕೆ ಭಾರತವು ಪಾಕ್ ನ ಭೂಪ್ರದೇಶವನ್ನು ಬಳಸದಂತೆ ಕೇಳಿಕೊಂಡಾಗ ಅದಕ್ಕೆ ನಿರಾಕರಿಸಿತ್ತು.