- ಕ್ಯಾನ್ಸರ್ ಗೆ ಕಡಿವಾಣ ಹಾಕುವ ಯತ್ನ: ಶೀಘ್ರ ಅನುಷ್ಠಾನದ ನಿರೀಕ್ಷೆ
ನ್ಯೂಸ್ ನಾಟೌಟ್: ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಕಡ್ಡಾಯವಾಗಲಿದ್ದು, ಇನ್ನುಮುಂದೆ ಬೇಕಾಬಿಟ್ಟಿ ಮಾರಾಟ ಮಾಡಿದರೆ ಕಡಿವಾಣ ಬೀಳಲಿದೆ. ತಂಬಾಕು ಉತ್ಪನ್ನಗಳಿಂದ ಮಾರಕ ಕ್ಯಾನ್ಸರ್ ರೋಗ ತಗುಲುವುದರಿಂದ ಹಾಗೂ ಇಂತಹ ಉತ್ಪನ್ನಗಳು ಯುವಜನತೆಗೆ ಸೇರಿದಂತೆ ಸಾರ್ವಜನಿಕರಿಗೆ ಸುಲಭವಾಗಿ ಕೈಗೆ ಎಟಕುವುದರಂದ ಇದರ ನಿಯಂತ್ರಣಕ್ಕೆ ಅಬಕಾರಿ ಮಾದರಿಯಲ್ಲಿ ಪರವಾನಗಿ ಕಡ್ಡಾಯ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆ ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳಿಂದ ಪರವಾನಗಿ ಕಡ್ಡಾಯವಾಗಲಿದೆ.
” ಕೋಟ್ಪಾ” Cigarettes and Other Tobacco Products Act (COTPA)ಕ್ಕಿಂತಲೂ ಪರಿಣಾಮಕಾರಿ
ಪ್ರಸ್ತುತ ಕೋಟ್ಪಾ 2003 ರಲ್ಲಿ ಜಾರಿಯಲ್ಲಿದೆ. ಆದರೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಕಡ್ಡಾಯವಿರಲಿಲ್ಲ. ಪ್ಯಾಕೆಟ್ ಸಿಗರೇಟ್ ಮಾತ್ರವೇ ಮಾರಾಟ ಮಾಡಬೇಕು , ಅಂಗಡಿಗಳಲ್ಲಿ ಸೂಕ್ತ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಮುಂತಾದ ನಿಯಮಗಳು ಮಾತ್ರ ಜಾರಿಯಲ್ಲಿತ್ತು. ಈ ನಿಯಮಗಳನ್ನು ಉಲ್ಲಂಘಿಸಿದರೆ ಎಫ್ ಐ ಆರ್ ದಾಖಲಿಸಿ ಲೈಸನ್ಸ್ ರದ್ದು ಮಾಡುವ ಅವಕಾಶವಿದೆ. ಆದರೆ ಇದು ತುಂಬಾ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ಪರವಾನಗಿ ಕಡ್ಡಾಯ ನಿಯಮ ಜಾರಿಯಿಂದ ಶಾಲಾ ಕಾಲೇಜುಗಳ ಸುತ್ತ ಮುತ್ತ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಬೀಳಲಿದೆ.
ವರ್ಷಕ್ಕೆ 1೦ಲಕ್ಷ ಜನ ಸಾವು
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ ವರ್ಷಕ್ಕೆ ಸುಮಾರು 10 ಲಕ್ಷ ಜನರು ತಂಬಾಕಿನ ಪರಿಣಾಮ ಶ್ವಾಸಕೋಶದ ಕ್ಯಾನ್ಸರ್ ಗೆ ತ್ತುತ್ತಾಗಿ ಮೃತಪಟ್ಟಿದ್ದಾರೆ. ಇದರಲ್ಲಿ ಶೇ. 90ರಷ್ಟು ಪುರುಷರು, ಶೇ, 70ರಷ್ಟು ಮಂದಿ ಮಹಿಳೆಯರು ಇದ್ದಾರೆ ಎನ್ನುತ್ತಾರೆ ತಜ್ಞರು.
ದಂಡ ಪಾವತಿಸಿ ವ್ಯಾಪಾರ!
ಕೋಟ್ಪಾ ತಂಡವು ನಿಯಮ ಉಲ್ಲಂಘಿಸುವ ಅಂಗಡಿ ಮಾಲಿಕರಿಗೆ, ಸಾರ್ವಜನಿಕವಾಗ ಧೂಮಪಾನ ಮಾಡುವವರಿಗೆ ದಂಡ ವಧಿಸುತ್ತಿದೆ. ಆದರೆ ನಿಯಮ ಉಲ್ಲಂಘಿಸಿ ಅದೇ ನಿಯಮವನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 2021-22 ರಲ್ಲಿ ೪೫ ಕಡೆ ದಾಳಿ ನಡೆಸಿ 96,250 ರೂ, 2022-23ರಲ್ಲಿ ಉದುವರೆಗೆ ೫೪ ಪ್ರಕರಣಗಳಲ್ಲಿ 1,42,160 ರೂ. ಹಾಗೂ 2022-23 ರಲ್ಲಿ ಇದುವರೆಗೆ 800 ಪ್ರಕರಣಗಳಲ್ಲಿ 1,17,920 ರೂ. ದಂಡ ವಸೂಲಿ ಮಾಡಲಾಗಿದೆ.
“ಬೇಕಾಬಿಟ್ಟಿಯಾಗಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸುವ ಉದ್ದೇಶದಿಂದ ಸರಕಾರ ಪರವಾನಗಿ ಕಡ್ಡಾಯಗೊಳಿಸುವ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ನಿಯಮಾವಳಿ ಆದೇಶ ಶೀಘ್ರ ಕೈ ಸೇರುವ ನಿರೀಕ್ಷೆ ಇದ್ದು ಬಳಿಕ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯ ಕೋಟ್ಪಾ ಕಾಯ್ದೆಯಿಂದ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜನರಲ್ಲಿ ಜಾಗೃತಿ ಕೂಡ ಹೆಚ್ಚಬೇಕಿದೆ.”
-ಡಾ|ಜಗದೀಶ್ , ಡಾ| ನಾಗರತ್ನ ದ.ಕ. ಮತ್ತು ಉಡುಪಿ ಜಲ್ಲಾ ಸರ್ವೇಕ್ಷಣಾಧಿಕಾರಿಗಳು