ನ್ಯೂಸ್ ನಾಟೌಟ್: ಒಂದು ದಿನದೊಳಗೆ ಟರ್ಕಿಯಲ್ಲಿ ಮೂರು ಭಯಂಕರ ಭೂಕಂಪಗಳು ಸಂಭವಿಸಿದೆ. ಈ ಸಂದರ್ದಲ್ಲಿ ಟರ್ಕಿಗೆ ಸಹಾಯಹಸ್ತ ಚಾಚಿದ ಭಾರತವನ್ನು “ದೋಸ್ತ್” ಎಂದು ಟರ್ಕಿ ಕರೆದಿದೆ. ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದು ಮಾತ್ರವಲ್ಲದೆ “ಅಗತ್ಯಕ್ಕಾಗುವ ಸ್ನೇಹಿತ ನಿಜವಾಗಿಯೂ ಸ್ನೇಹಿತ” ಎಂದು ಹೇಳಿದ್ದಾರೆ.
ಟ್ವಿಟ್ ಮಾಡಿರುವ ಫಿರತ್ ಸುನೆಲ್, “ದೋಸ್ತ್” ಎಂಬುದು ಟರ್ಕಿಶ್ ಮತ್ತು ಹಿಂದಿಯಲ್ಲಿ ಸಾಮಾನ್ಯ ಪದವಾಗಿದೆ. ಅಗತ್ಯಕ್ಕಾಗುವ ಸ್ನೇಹಿತ ನಿಜವಾಗಿಯೂ ಸ್ನೇಹಿತ ಎಂಬ ಟರ್ಕಿಶ್ ಗಾದೆ, ಇದು ಭಾರತ ಮತ್ತು ಟರ್ಕಿಗೆ ಒಪ್ಪುವಂತ ಮಾತಾಗಿದೆ. ಭಾರತಕ್ಕೆ ತುಂಬಾ ಧನ್ಯವಾದಗಳು.” ಎಂದು ಟ್ವೀಟ್ ಮಾಡಿದ್ದಾರೆ.
ಭಾರತವು ವಿಶೇಷ ತರಬೇತಿ ಪಡೆದ ಶ್ವಾನ ದಳ ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಯನ್ನು ಒಳಗೊಂಡ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್ಡಿಆರ್ಎಫ್) ಯ ಎರಡು ತಂಡಗಳನ್ನು ಟರ್ಕಿಯ ಭೂಕಂಪ ಪೀಡಿತ ಪ್ರದೇಶಗಳಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಕಳುಹಿಸಿದೆ.