ನ್ಯೂಸ್ ನಾಟೌಟ್ : ತಾನು ಎಲ್ಲರಿಗಿಂತ ಚೆನ್ನಾಗಿ ಸುಂದರವಾಗಿ ಕಾಣಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಹುಡುಗಿಯರಿಗೆ ಅಂತೂ ಹೇಳೊದೆ ಬೇಡ.ಅದಕ್ಕೆಂದೇ ಮಾರುಕಟ್ಟೆಯಲ್ಲಿ ಬೇರೆ ಬೇರೆ ಪ್ರೊಡಕ್ಟ್ ಗಳು ಇವೆ . ತಮ್ಮ ಮುಖದ ಕಾಂತಿ ಹೆಚ್ಚಿಸಲು ಅದೆಷ್ಟೋ ದುಬಾರಿ ಬೆಲೆಯನ್ನು ಖರ್ಚು ಮಾಡುತ್ತೇವೆ. ಒಂದೊಂದು ಕಂಪನಿಯೂ ವಿವಿಧ ರೀತಿಯ ಬ್ಯೂಟಿ ವಸ್ತುಗಳನ್ನು ಜಾರಿಗೆ ತರುತ್ತಿದೆ. ಅದನ್ನೆಲ್ಲ ಹಚ್ಚಿದ ಆ ಸಂದರ್ಭ ಮಾತ್ರ ನಾವು ಸುಂದರವಾಗಿ , ನಮ್ಮ ಮುಖ ಹೊಳೆಯುವ ಹಾಗೆ ಕಾಣಬಹುದು . ಆದರೆ ಅದರಲ್ಲಿ ಅರ್ಧದಷ್ಟು ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ. ಇದರಿಂದ ಮಾರಕ ರೋಗಗಳಿಗೂ ತುತ್ತಾಗಬಹುದು. ಮುಖದ ತ್ವಚೆಯು ಹಾಳಾಗುತ್ತದೆ. ನಿಮ್ಮ ಮುಖದ ಕಾಂತಿ, ತ್ವಚೆಗಳನ್ನು ಕಾಪಾಡಿಕೊಳ್ಳಲು ಸಿಂಪಲ್ಲಾಗಿ ಮನೆಯಲ್ಲೇ ಟಿಪ್ಸ್ ಫೋಲೋ ಮಾಡಿ..
ಮೊಡವೆ , ಕಲೆ, ಟ್ಯಾನ್ ನಿವಾರಣೆಗೆ ಬಹಳ ಉಪಯುಕ್ತ ಬಾಳೆಹಣ್ಣು. ಬಾಳೆಹಣ್ಣನ್ನು ಮ್ಯಾಶ್ ಮಾಡಿ ಮತ್ತು ಒಂದು ಚಮಚ ಕಡ್ಲೆಹಿಟ್ಟು ಮತ್ತು ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಕಡಲೆ ಹಿಟ್ಟು ಮತ್ತು ನಿಂಬೆಯಿಂದ ಮಾಡಿದ ಈ ಫೇಸ್ ಪ್ಯಾಕ್ ತ್ವಚೆಯನ್ನು ಹಗುರಗೊಳಿಸುತ್ತದೆ. ಬಾಳೆಹಣ್ಣು ಸೇವನೆಯಿಂದ ಆರೋಗ್ಯ ಮಾತ್ರವಲ್ಲ ತ್ವಚೆಗೂ ಬಹಳ ಉಪಯೋಗ ಇದೆ. ಸಮೃದ್ಧವಾಗಿರುವ ಬಾಳೆಹಣ್ಣು, ಚರ್ಮವನ್ನು ಮೃದುವಾಗಿ, ಹೊಳೆಯುವಂತೆ ಮಾಡುತ್ತದೆ. ಬಾಳೆಹಣ್ಣಿನ ಫೇಸ್ ಪ್ಯಾಕ್ ಮುಖದಲ್ಲಿರುವ ಎಣ್ಣೆಯನ್ನು ಹೋಗಲಾಡಿಸುತ್ತದೆ. ಅಲ್ಲದೆ, ಇದು ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಮನೆಯಲ್ಲೇ ನೀವು ಬಹಳ ಸುಲಭವಾಗಿ ಈ ಫೇಸ್ ಪ್ಯಾಕ್ ಮಾಡಬಹುದು. ಇದಕ್ಕಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ.
ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ಆಪಲ್ ಸೈಡರ್ ವಿನೆಗರ್ .ಆಪಲ್ ಸೈಡರ್ ವಿನೆಗರ್ ಜತೆ ಜೇನುತುಪ್ಪ ಸಕ್ಕರೆ ಬೆರೆಸಿ ನಿಮ್ಮ ಕತ್ತು ಹಾಗೂ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ. 5-10 ನಿಮಿಷದ ನಂತರ ಮುಖ ತೊಳೆದು ಮಾಯಿಶ್ಚರೈಸರ್ ಹಚ್ಚಿ. ದಿನ ಕಳೆದಂತೆ ನಿಮ್ಮ ಮುಖದ ಮೇಲಿನ ಬದಲಾವಣೆಗಳನ್ನ ನೀವೆ ಗಮನಿಸಬಹುದು. ಆಪಲ್ ಸೈಡರ್ ವಿನೆಗರ್ ಜೊತೆ ನೀರು ಬೆರೆಸಿ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಹಾಗೆಯೇ ಚರ್ಮ ಕಾಂತಿಯುತವಾಗುತ್ತದೆ.
ನಿಮ್ಮ (ಹೆಣ್ಮಕ್ಕಳು , ಮಹಿಳೆಯರಲ್ಲಿ) ಮುಖದ ಮೇಲೆ ಕೂದಲು ಎದ್ದು ಕಾಣ್ತಿದ್ಯಾ ? ರೇಸರ್, ವ್ಯಾಕ್ಸಿಂಗ್ ಬಿಟ್ಟು ಈ ನೈಸರ್ಗಿಕ ಪ್ಯಾಕ್ ಹಚ್ಚಿಕೊಳ್ಳಿ.ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಕಾರ್ನ್ ಸ್ಟಾರ್ಚ್ ಮತ್ತು 1 ಚಮಚ ಸಕ್ಕರೆ ಸೇರಿಸಿ. ಮೃದುವಾದ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಮಾಸ್ಕ್ ಒಣಗಿದ ನಂತರ ಮುಖ ತೊಳೆಯಿರಿ. ಪುರುಷರಿಗೆ ಗಡ್ಡ ಮೀಸೆ ಇದ್ದರೆ ಲಕ್ಷಣ. ಆದರೆ ಮಹಿಳೆಯರಿಗೆ ಮುಖದ ಮೇಲಿನ ಕೂದಲು ಅಂದವನ್ನೇ ಹಾಳು ಮಾಡುತ್ತದೆ. ಅದರಲ್ಲೂ ಕೆಲವು ಮಹಿಳೆಯರಿಗೆ ಕೀಳರಿಮೆ ಹಾಗೂ ಮುಜುಗರ ತರುತ್ತದೆ. ಒತ್ತಡ ಮತ್ತು ಹಾರ್ಮೋನ್ ಅಸಮತೋಲನದಿಂದ ಮುಖದ ಕೂದಲು ವಿಪರೀತವಾಗಿ ಬೆಳೆಯುವ ಸಾಧ್ಯತೆಯಿದೆ.
ಹಸಿ ಪಪ್ಪಾಯಿಯಲ್ಲಿ ಪಾಪೈನ್ ಅಂಶವಿದೆ. ಇದು ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ. 2 ಟೇಬಲ್ ಸ್ಪೂನ್ ಹಸಿ ಪಪ್ಪಾಯಿ ಪೇಸ್ಟ್ ಹಾಗೂ ಅರ್ಧ ಟೀ ಚಮಚ ಅರಿಶಿಣ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ ನಿಧಾನವಾಗಿ ಸ್ಕ್ರಬ್ ಮಾಡಿ, ನಂತರ ತೊಳೆಯಿರಿ . ಹೀಗೆ ವಾರಕ್ಕೆ ಮೂರು ಬಾರಿ ಈ ಪ್ಯಾಕ್ ಹಾಕಿದರೆ ಕೂದಲಿನ ಬೆಳವಣಿಗೆ ಕಡಿಮೆಯಾಗುತ್ತದೆ.
ಎರಡು ಸ್ಪೂನ್ ಅಕ್ಕಿ ಹಿಟ್ಟು , ಅರ್ಧ ಸ್ಪೂನ್ ಅರಿಶಿಣ ಪುಡಿಗೆ ಹಾಲು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ . ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ನಂತರ ಮಾಯಿಶ್ಚರೈಸರ್ ಹಚ್ಚಿ. ಈ ಸಲಹೆ ಅನುಸರಿಸಿದರೆ ಮುಖದ ಮೇಲಿನ ಕೂದಲು ಕಡಿಮೆಯಾಗಿ ನಿಮ್ಮ ಮುಖ ಮೃದು ಹಾಗೂ ಕಾಂತಿಯುತವಾಗಿರುತ್ತದೆ.