ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಎಂ.ಬಿ. ಫೌಂಡೇಶನ್ ನೇತೃತ್ವದಲ್ಲಿ ನಡೆಸುವ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಫೆ.12ರಂದು ನಡೆಯಲಿದೆ. ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಆಗಮಿಸಲಿದ್ದಾರೆ ಎಂದು ಎಂ.ಬಿ. ಫೌಂಡೇಶನ್ನ ಅಧ್ಯಕ್ಷ ಎಂ.ಬಿ. ಸದಾಶಿವ ಸುಳ್ಯ ಪ್ರೆಸ್ ಕ್ಲಬ್ ನ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು 1.45 ಕೋಟಿ ವೆಚ್ಚದ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಖ್ ವೃತ್ತಿ ಶಿಕ್ಷಣ ಕೇಂದ್ರ ಉದ್ಘಾಟಿಸಲಿದ್ದಾರೆ.ಸುಳ್ಯ ಎ.ಒ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ವೈದ್ಯಕೀಯ ತಪಾಸಣಾ ಕೊಠಡಿ ಉದ್ಘಾಟಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಭೋಜನ ಶಾಲೆಯನ್ನು,ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಫಿಸಿಯೋ ತೆರಫಿ ಕೊಠಡಿ ಉದ್ಘಾಟಿಸುವರು.ಸಚಿವ ಎಸ್.ಅಂಗಾರ ಕೆಳ ಅಂತಸ್ತಿನ ಶಾಲಾ ಕೊಠಡಿ ಉದ್ಘಾಟಿಸಲಿದ್ದು,ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ. ಕಚೇರಿಯನ್ನು ಉದ್ಘಾಟಿಸುವರು.ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಸಂಜೀತ್ ಶೆಟ್ಟಿ ನಾಯಕತ್ವ ತರಬೇತಿ ಕೇಂದ್ರ ಉದ್ಘಾಟಿಸುವರು.ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಸಂಕೇಶ್, ಡಾ.ಆರ್.ಕೆ. ನಾಯರ್ ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ. ಫೌಂಡೇಶನ್ನ ಖಜಾಂಚಿ ಪುಷ್ಪಾ ರಾಧಾಕೃಷ್ಣ, ಟ್ರಸ್ಟಿಗಳಾದ ಎಸ್.ಆರ್. ಸೂರಯ್ಯ, ಶರೀಫ್ ಜಟ್ಟಿಪಳ್ಳ, ಶಾಲಾ ಮಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ ಇದ್ದರು.