ನ್ಯೂಸ್ ನಾಟೌಟ್: ವಿಶ್ವ ಹಿಂದೂ ಪರಿಷತ್ ಬಜರಂಗದಳ ದುರ್ಗಾವಾಹಿನಿ ಸುಳ್ಯ ಪ್ರಖಂಡ ವತಿಯಿಂದ ಫೆ. 12ರಂದು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರದ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ಸುಳ್ಯ ಅಧ್ಯಕ್ಷ ಸೋಮಶೇಖರ್ ಪೈಕ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಬಿರವನ್ನು ಮೀನುಗಾರಿಕಾ ಒಳನಾಡು ಬಂದರು ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದಾರೆ. ಅನೇಕ ಗಣ್ಯರು, ಆಡಳಿತಾಧಿಕಾರಿಗಳು, ವೈದ್ಯಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ದುರ್ಗಾವಾಹಿನಿ ಸುಳ್ಯ ಪ್ರಖಂಡ, ರಕ್ತ ನಿಧಿ ಘಟಕಾ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಭಾರತೀಯ ವೈದ್ಯಕೀಯ ಸಂಘ ಸುಳ್ಯ, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಸರಕಾರಿ ಆಸ್ಪತ್ರೆ ಸುಳ್ಯ ಇವರ ಸಂಯಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ರಕ್ತದಾನ ಮಹತ್ವಪೂರ್ಣ ಕಾರ್ಯವಾದುದರಿಂದ ಹೆಚ್ಚಿನ ಜೀವ ಉಳಿಸುವುದು ನಮ್ಮ ಯೋಜನೆಯಾಗಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾಜಮುಖಿ ಕಾರ್ಯದಲ್ಲಿ ಪಾತ್ರರಾಗಬೇಕು ಎಂದು ಸೋಮಶೇಖರ್ ಪೈಕ ತಿಳಿಸಿದರು. ಬಜರಂಗದಳ ಸುಳ್ಯ ಪ್ರಖಂಡ ಸಂಚಾಲಕ ಹರಿಪ್ರಸಾದ್ ಎಲಿಮಲೆ, ಕಾನೂನು ಸಲಹಗಾರ ಸಂದೀಪ್, ಕಾರ್ಯದರ್ಶಿ ರಂಜಿತ್, ನವೀನ್ ಎಲಿಮಲೆ, ಪ್ರಸಾದ್, ಪೂರ್ಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.