ನ್ಯೂಸ್ ನಾಟೌಟ್: ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಗೂನಡ್ಕದ ಮಖಾಂ ಉರೂಸ್ ಫೆ.17ರಿಂದ 19ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ. ಶಹೀದ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಾತಿ, ಮತ, ಭೇದವಿಲ್ಲದೆ ಸರ್ವರಿಂದಲೂ ಗೌರವಿಸಲ್ಪಡುವ ಆಶಾ ಕೇಂದ್ರವಾದ ಪೇರಡ್ಕ ದರ್ಗಾ ಶರೀಫ್ ಉರೂಸ್ ಸಮಾರಂಭ ಮತ್ತು ಮೂರು ದಿನಗಳ ಧಾರ್ಮಿಕ ಉಪನ್ಯಾಸ ಅದ್ದೂರಿಯಿಂದ ನಡೆಯಲಿದೆ. ಸಮಾರಂಭಕ್ಕೆ ವಿವಿಧ ರಾಜ್ಯಗಳಿಂದ ಗಣ್ಯರು, ಉಸ್ತಾದ್, ಗುರುಗಳು ಆಗಮಿಸಲಿದ್ದು, ಉರೂಸ್ ಗೆ ಎಲ್ಲರೂ ಜಾತಿ – ಬೇಧ- ಮತ ಮರೆತು ಬರಬೇಕು ಎಂದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್, ಎಂ.ಆರ್.ಡಿ.ಎ. ಗೂನಡ್ಕ ಜಾಕೀರ್ ಹುಸೈನ್, ಅಬ್ದುಲ್ ಖಾದರ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಹನೀಫ್ ಸುದ್ದಿಗೋಷ್ಠಿಯಲ್ಲಿದ್ದರು.