ನ್ಯೂಸ್ ನಾಟೌಟ್ :ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆಬ್ರವರಿ 11ರಂದು ಪುತ್ತೂರಿಗೆ ಭೇಟಿ ನೀಡಲಿದ್ದಾರೆ.ಈ ಹಿನ್ನಲೆಯಲ್ಲಿ ಅವರು ಈಶ್ವರಮಂಗಲಕ್ಕೆ ಗ್ರಾಮಕ್ಕೆ ಭೇಟಿ ನೀಡಿ ಇತಿಹಾಸ ಪ್ರಸಿದ್ದ ಹನುಮಗಿರಿ ಕ್ಷೇತ್ರದಲ್ಲಿ ನೂತನ ಅಮರಗಿರಿ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇಲ್ಲಿನ ಪರಿಸರ ಹಾಗೂ ಕ್ಷೇತ್ರವನ್ನು ವೀಕ್ಷಿಸಲೆಂದೇ ಭಕ್ತರು ಮಾತ್ರವಲ್ಲದೇ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹನುಮ ಗಿರಿಯಲ್ಲಿ ತಮ್ಮ ಇಷ್ಟಾರ್ಥ ಬೇಡಿಕೊಂಡರೆ ನೆರವೇರುತ್ತೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ. ಇಲ್ಲಿ ರಾಮಾಯಣದ ಸಂಪೂರ್ಣ ಮಾಹಿತಿ ಇರುವ ಕಲ್ಲಿನ ಕೆತ್ತನೆಗಳಿದ್ದು ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. ಇದೀಗ ಅಮರ ಗಿರಿ ಮೂಲಕ ಸಮಗ್ರ ಭಾರತ ದರ್ಶನದ ಪರಿಚಯ ನೀಡುವ ಶಿಲ್ಪಗಳು ಹಾಗೂ ಚಿತ್ತಾರಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ಫೆ. 11 ರಂದು ಜಿಲ್ಲೆಗೆ ಆಗಮಿಸುವ ಗೃಹ ಸಚಿವ ಅಮಿತ್ ಶಾ ಈಶ್ವರಮಂಗಲಕ್ಕೆ ತೆರಳಿ ಹನುಮ ಗಿರಿಯಲ್ಲಿನ ಅಮರ ಗಿರಿ ಮಂದಿರದ ಅಷ್ಟ ಭುಜಾಕೃತಿಯ ಆಲಯದೊಳಗೆ ಇರುವ ಭಾರತಾಂಬೆಗೆ ಪುಷ್ಪಾರ್ಚನೆ ನಡೆಸಿ ದೀಪ ಬೆಳಗುವ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಈ ಭಾಗದಲ್ಲಿ ಅಮಿತ್ ಶಾ ಅವರು ಇರಲಿದ್ದಾರೆ ಎಂದು ತಿಳಿದು ಬಂದಿದೆ.