ವೈರಲ್ ನ್ಯೂಸ್

ಬಾಂಬ್ ಸ್ಫೋಟ, ಸ್ವಲ್ಪದರಲ್ಲೇ ನಟಿ ಸನ್ನಿ ಲಿಯೋನ್ ಬಚಾವ್‌..!

ನ್ಯೂಸ್ ನಾಟೌಟ್: ಬಾಲಿವುಡ್ ನಟಿ ಸನ್ನಿ ಲಿಯೋನ್ ಬಾಂಬ್ ಸ್ಫೋಟವೊಂದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಮಣಿಪುರದ ಇಂಪಾಲ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ಸ್ಫೋಟಕ್ಕೂ ಮೊದಲು ಇಂಪಾಲ್‌ನಲ್ಲಿ ನಟಿ ಸನ್ನಿ ಲಿಯೋನ್ ಫ್ಯಾಶನ್ ಶೋ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವುದಿತ್ತು.

ಇಂಪಾಲ್‌ನ ಹಟ್ಟ ಕಂಜೇಲ್‌ಬಂಗ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಯಾರಿಗೂ ಗಾಯಗಳಾದ ಬಗ್ಗೆ ವರದಿ ಆಗಿಲ್ಲ. ಫ್ಯಾಶನ್ ಶೋ ನಡೆಯಬೇಕಿದ್ದ ಸ್ಥಳದಿಂದ ಕೇವಲ 100 ಮೀ. ದೂರದಲ್ಲಿ ಶನಿವಾರ ಸ್ಫೋಟ ಸಂಭವಿಸಿದೆ. ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಸಹ ಭಾಗವಹಿಸಬೇಕಿತ್ತು. ಸುಧಾರಿತ ಸ್ಫೋಟಕ ಅಥವಾ ಗ್ರೆನೇಡ್ ಯಾವುದರಿಂದ ಸ್ಪೋಟ ಸಂಭವಿಸಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

Related posts

ರಾಮ ಮಂದಿರ ಸ್ಫೋಟದ ಬೆದರಿಕೆ ಹಾಕಿದ 21ರ ಯುವಕ! ದಾವೂದ್ ಇಬ್ರಾಹಿಂ ಸಹಚರನೆಂದು ಹೇಳಿಕೊಂಡಿದ್ದವ ಲಾಕ್ ಆದದ್ದೇಗೆ..?

ಅಮ್ಮನ ವಿರುದ್ದ ದೂರು ಹೇಳಲು 130ಕಿ.ಮೀ ಸೈಕಲ್ ತುಳಿದ ಬಾಲಕ..! ಪೊಲೀಸರ ಎದುರು 11ರ ಪೋರ ಹೇಳಿದ್ದೇನು?

ತಮಿಳರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಶೋಭಾ ಕರಂದ್ಲಾಜೆ..! ಏನಿದು ವಿವಾದ..? ಸಚಿವೆ ಕ್ಷಮೆ ಕೇಳಿದ್ದೇಕೆ..?