ನ್ಯೂಸ್ ನಾಟೌಟ್: ವಿಮಾನದೊಳಗೆ ಮಹಿಳೆಯೊಬ್ಬರ ಮೇಲೆ ಇತ್ತೀಚೆಗೆ ವ್ಯಕ್ತಿಯೊಬ್ಬ ಮೂತ್ರ ಮಾಡಿರುವ ವಿಚಾರ ಭಾರಿ ಗಲಾಟೆಗೆ ಕಾರಣವಾಗಿತ್ತು. ಇದೀಗ ಅಂತಹುದೇ ಮತ್ತೊಂದು ಘಟನೆ ಹಾರುತ್ತಿರುವ ವಿಮಾನದೊಳಗೆ ನಡೆದಿದೆ. ಈ ವಿಚಿತ್ರ ಘಟನೆ ಹಲವು ಪ್ರಯಾಣಿಕರಿಗೆ ಇರಿಸು ಮುರಿಸು ತಂದಿರುವುದಂತೂ ಸುಳ್ಳಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದೀಗ ಮಹಿಳೆಯ ಬಂಧನವಾಗಿದೆ. ಕೆಲವೇ ಹೊತ್ತಿನಲ್ಲಿಬೇಲ್ ಮೇಲೆ ಹೊರಗೆ ಬಂದಿದ್ದಾಳೆ.
ಏನಿದು ಅರೆಬೆತ್ತಲೇ ವಿವಾದ?
ಈ ಘಟನೆ ಮುಂಬೈನಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ. ಅಬುಧಾಬಿಯಿಂದ ಮುಂಬೈಗೆ ಹೊರಟಿದ್ದ ವಿಸ್ತಾರ ಏರ್ಲೈನ್ಸ್ (ಯುಕೆ256)ನಲ್ಲಿಇಟಲಿಯ 45 ವರ್ಷದ ಪಾವೊಲಾ ಪೆರುಸಿಯೊ ಎಂಬ ಮಹಿಳೆಯು ವಿಮಾನದಲ್ಲಿ ಎಕಾನಾಮಿಕ್ ಕ್ಲಾಸ್ನಲ್ಲಿ ಆಸನ ಬುಕ್ ಮಾಡಿದ್ದಳು, ಆದರೆ ಆಕೆ ಬ್ಯುಸಿನೆಸ್ ಕ್ಲಾಸ್ನಲ್ಲಿಕುಳಿತಿದ್ದಳು. ಇದನ್ನು ವಿಮಾನದ ಸಿಬ್ಬಂದಿ ಆಕ್ಷೇಪಿಸಿದಾಗ ಆಕೆ ಅವರ ಮೇಲೆ ಹಲ್ಲೆ ಮಾಡಿ ಅವರ ಮೇಲೆ ಎಂಜಲು ಉಗಿದ್ದಿದ್ದಾಳೆ ಎಂದು ತಿಳಿದು ಬಂದಿದೆ. ಅದಲ್ಲದೆ ಆಕೆ ಅರೆಬೆತ್ತಲೆಯಾಗಿ ವಿಮಾನದಲ್ಲಿ ಖಾಲಿ ಜಾಗದಲ್ಲೆಲ್ಲಾ ಓಡಾಡಲು ಶುರು ಮಾಡಿದ್ದಳು.
ಆಕೆಯ ವರ್ತನೆ ನೋಡಿದ ಕ್ಯಾಬಿನ್ ಸಿಬ್ಬಂದಿ ಆಕೆಯನ್ನು ನಿರಾಕರಿಸಿದಾಗ ಆಕೆಯು ಅವರ ಮೇಲೆ ಗುದ್ದಿದಳು ಮತ್ತು ಉಗುಳಲು ಪ್ರಾರಂಭಿಸಿದಳು. ಈ ವಿಚಾರವನ್ನು ವಿಮಾನದ ಸಿಬ್ಬಂದಿ ದೂರು ದಾಖಲಿಸಿದ್ದರು. ಆಕೆ ಮುಂಬೈನ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಆ ಸ್ಥಳಕ್ಕೆ ಮುಂಬೈಯ ಶಹರ್ ಪೊಲೀಸರು ಆಗಮಿಸಿ ಬಳಿಕ ಪಾಸ್ಪೋರ್ಟ್ ಸೀಜ್ ಮಾಡಿ ಆಕೆಯನ್ನು ಬಂಧಿಸಿದರು.