ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ತಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮ ಪಡುವುದು ಒಂದು ಟ್ರೆಂಡ್ ,ಆದರೆ ಇಲ್ಲೊಬ್ಬರು ತಾನು ಸಾಕಿದ ಹೋರಿಯ ಹುಟ್ಟು ಹಬ್ಬವನ್ನು ಆಚರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.ಅಂದ ಹಾಗೆ ಈ ಘಟನೆ ನಡೆದಿದ್ದು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ. ರೈತರೊಬ್ಬರು ತಾವು ಸಾಕಿದ ಹೋರಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
ಅದ್ದೂರಿ ಹುಟ್ಟುಹಬ್ಬ:
ಆ ಗ್ರಾಮದ ಜನರೆಲ್ಲರನ್ನು ಸೇರಿಸಿ 5 ವರ್ಷದ ಹಿಂದೆ ತಮ್ಮ ಮನೆಯಲ್ಲಿ ಹುಟ್ಟಿದ ಹೋರಿಗೆ ರೈತ ಮಲ್ಲಪ್ಪ ಗಾಜರ ಅವರುವ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಹೋರಿ ಹುಟ್ಟಿದಾಗಲೇ ಹೋರಿಗೆ ಪ್ರೀತಿಯಿಂದ ರಾಜ ಅಂತಾ ಹೆಸರಿಟ್ಟಿದ್ದಾರೆ. ಪ್ರತಿ ವರ್ಷವೂ ರಾಜನ ಬರ್ತಡೇ ಮಾಡುತ್ತಾ ಬರುತ್ತಿದ್ದು,ಈ ವರ್ಷ ಐದು ವರ್ಷ ಆಗಿರುವುದರಿಂದ
ಸಂಭ್ರಮ ಮನೆ ಮಾಡಿತ್ತು. ಪ್ರತಿ ವರ್ಷ ಗಣರಾಜೋತ್ಸವ ದಿನದಂದೇ ( ಜನವರಿ 26 ರಂದು )ಹೋರಿಯ ಬರ್ತಡೇ ಆಚರಿಸಿ ಊಟ ಹಾಕುತ್ತಾರೆ. ಇದಿಷ್ಟು ಮಾತ್ರವಲ್ಲ ಡಿಜೆ ಹಚ್ಚಿ ಯುವಕರು ಸೇರಿ ಸಂಭ್ರಮಿಸುತ್ತಾರೆ.
5 ಕೆಜಿ ಕೇಕ್ :
ನೆಚ್ಚಿನ ಹೋರಿ ರಾಜನಿಗಾಗಿ ಮಾಲಿಕ ಮಲ್ಲಪ್ಪ 5 ಕೆಜಿಯ ಕೇಕ್ ರೆಡಿ ಮಾಡಿಸಿ, ಊರ ಜನರನ್ನು ಒಂದೆಡೆ ಸೇರಿಸಿ ಬರ್ತಡೇ ಆಚರಿಸಿದ್ದಾರೆ. ಒಂದನೇ ವರ್ಷದ ಬರ್ತಡೇಗೆ
ಒಂದು ಕೆ.ಜಿ, ಎರಡನೇ ವರ್ಷದ ಬರ್ತಡೇಗೆ ಎರಡು ಕೆ.ಜಿ. ಮೂರನೇ ವರ್ಷಕ್ಕೆ ಮೂರು ಕೆ.ಜಿ, ಅದೇ ರೀತಿ 5ನೇ ವರ್ಷದ ಬರ್ತಡೆಗೆ 5
ಕೆಜಿ ಕೇಕ್ ಕಟ್ ಮಾಡಿದ್ದು, ಆಶ್ಚರ್ಯವೆಂಬಂತಿದೆ.