ನ್ಯೂಸ್ ನಾಟೌಟ್ : ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆಯಾಗಲಿದ್ದು, ಜ. 28 ಹಾಗೂ 29ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಅದ್ದೂರಿಯಿಂದ ನಡೆಯಲಿದೆ.
ಜ. 28 ಶನಿವಾರ ಬೆಳಗ್ಗೆ 10.35 ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಲಿದ್ದಾರೆ. ಸಂಜೆ ನಡೆಯುವ ಸಭಾಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಎಂ ಅರ್ಜಿ ಬಂಜಾರ ಗ್ರೂಪ್ಸ್ ಚೇರ್ ಮಾನ್ ಪ್ರಕಾಶ್ ಶೆಟ್ಟಿ, ಶಾಸಕರು ವಿಧಾನಸಭಾ ವಿಪಕ್ಷ ಉಪನಾಯಕ ಯ.ಟಿ. ಖಾದರ್, ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್,ಮಾಜಿ ಸಚಿವ ರಮಾನಾಥ ರೈ, ಮಂಜುನಾಥ ಭಂಡಾರಿ ,ಅಭಯಚಂದ್ರ ಜೈನ್ ಹಾಗೂ ಹಲವಾರು ಧಾರ್ಮಿಕ, ಸಾಮಾಜಿಕ, ಮುಖಂಡರುಗಳು, ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.
ಈ ಬಾರಿಯ ಕಂಬಳದಲ್ಲಿ ವಿಷೇಶವಾಗಿ ಸಂಗೀತ ನಿರ್ದೇಶಕ ಗುರುಕಿರಣ್,ಚಿತ್ರನಟ ರೂಪೇಶ್ ಶೆಟ್ಟಿ,ವಜ್ರಧೀರ್ ಜೈನ್ ಅದಿತಿ ಪ್ರಭುದೇವ ಹಲವಾರು ಚಿತ್ರನಟರು ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಎನ್ ಸುಧಾಕರ ಶೆಟ್ಟಿ (ಧಾರ್ಮಿಕ),ಅಪ್ಪುಯಾನೆ ವಲೇಕುರಿಯನ್ ಡೇಸಾ ಅಲ್ಲಿಪಾದೆ(ಕಂಬಳ), ಆಕಾಶ್ ಐತಾಳ್(ಕ್ರೀಡಾ),ಸತೀಶ್ ದೇವಾಡಿಗ (ಹಿರಿಯ ಕಂಬಳ ಓಟಗಾರ) ಹಾಗೂ ಶ್ರೀಧರ್ ಮಾರೋಡಿ( ಕ್ರೀಡಾರತ್ನ ಪುರಸ್ಕ್ರತ ಕಂಬಳ ಓಟಗಾರ) ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕನೆಹಲಗೆ, ಅಡ್ಡಹಲಗೆ, ಹಗ್ಗ ಕಿರಿಯ, ಹಿರಿಯ ನೇಗಿಲು ,ಕಿರಿಯ ನೇಗಿಲು ಆರು ವಿಭಾಗಗಳಲ್ಲಿ ಕಂಬಳ ನಡೆಯಲಿದೆ. ಈ ಬಾರಿ ೨೦೦ ಕ್ಕೂ ಅಧಿಕ ಜೋಡಿ ಕೋಣಗಳು ಪಾಲ್ಗೊಳ್ಳಲಿದೆ. ಹಾಗೂ ಕೋಣದ ಮಾಲಕರಿಗೆ ಚಿನ್ನದೊಂದಿಗೆ ವಿಶೇಷ ಕೋಟಿ-ಚೆನ್ನಯ ಟ್ರೋಪಿ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಿದ್ದು ಅದ್ದೂರಿಯಿಂದ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.