ನ್ಯೂಸ್ ನಾಟೌಟ್: ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿ ಯ ವಾರ್ಷಿಕ ಮಹಾ ಸಭೆಯು ಜನವರಿ 20 ರಂದು ಸುಬುಲು ಸ್ಸಲಾಂ ಮದ್ರಸದಲ್ಲಿ ನಡೆಯಿತು. ಜಮಾಅತ್ ಅದ್ಯಕ್ಷರಾದ ಅಬ್ದುಲ್ ರಝಾಕ್ ಎಸ್ ಎ ಅದ್ಯಕ್ಷತೆ ವಹಿಸಿದರು, ಖತೀಬರಾದ ಅಬ್ದುಲ್ ಹಮೀದ್ ಅಮ್ಜದಿ ಉಸ್ತಾದರು ದುಅ ನೆರವೇರಿಸಿದರು, ಕಾರ್ಯದರ್ಶಿ ರಪೀಕ್ ಪಿ ಐ ರವರು ವಾರ್ಷಿಕ ವರದಿ ಲೆಕ್ಕ ಪತ್ರ ಗಳನ್ನು ಮಂಡಿಸಿದರು.
ಜಿಲ್ಲಾ ವಕ್ಫ್ ಮಾಜಿ ಸದಸ್ಯ ಹಾ|| ಎಸ್ ಮೊಯಿದ್ದೀನ್ ಕುಂನ್ನಿ ಹಾಗೂ ಮಾಜಿ ಅದ್ಯಕ್ಷ ಹಾಜಿ ಅಲವಿ ಕುಟ್ಟಿ ಹಾಗೂ ನಿರ್ಮಾಣ ಸಮಿತಿ ಅದ್ಯಕ್ಷ ಅಬ್ದುಲ್ ರಹಿಮಾನ್ ಎಸ್ ಪಿ ರವರು ಉಪಸ್ಥಿತರಿದ್ದರು . ಸಭೆಯಲ್ಲಿ ಹಿಂದಿನ ಸಮಿತಿಯನ್ನೇ ಮುಂದಿನ 2023 ನೇ ಸಾಲಿಗೆ ಪುನರಾಯ್ಕೆ ಮಾಡಲಾಯಿತು .
ಅದ್ಯಕ್ಷರಾಗಿ ಅಬ್ದುಲ್ ರಝಾಕ್ ಎಸ್ ಎ, ಪ್ರ.ಕಾರ್ಯದರ್ಶಿ ರಪೀಕ್ ಪಿ ಐ, ಉಪಾದ್ಯಕ್ಷರಾಗಿ ಕುಂಜಲಿ ಕೆ. ಎ. ಕಾರ್ಯದರ್ಶಿ ಯಾಗಿ ಹಸೈನಾರ್ ಟಿ ಎಮ್, ನಿರ್ದೇಶಕರಾಗಿ ಹಾಜಿ ಆಲವಿ ಕುಟ್ಟಿ, ಅಬ್ದುಲ್ ರಹಿಮಾನ್ ಎಸ್ ಪಿ, ಮುಹಮ್ಮದ್ ಹಾರಿಸ್, ಟಿ ಕೆ ರಪೀಕ್, ನಾಸಿರ್ ಎ ಯು, ಮುಸ್ತಫ ಟಿ ಎಮ್, ಕುಂಜಿ ಮಹಮ್ಮದ್ ಎಮ್ ಕೆ, ರವರನ್ನು ಅರಿಸಲಾಯಿತು, ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಸ್ಥಳಿಯ ಖತೀಬ್ ಅಬ್ದುಲ್ ಹಮೀದ್ ಅಮ್ಜದಿ, ಕುಂಜೀ ಮಹಮ್ಮದ್ ಟಿ ಎಮ್, ಅಬ್ದುಲ್ಲ ಕೆ ಎ, ಹನೀಫ್ ಎಸ್ ಪಿ, ಹಾಗೂ ಖಾಯಂ ಆಹ್ವಾನಿತರಾಗಿ NIA ಅಧ್ಯಕ್ಷರಾದ ನಸೀರ್ ಎಮ್ ಎಮ್ ರವರನ್ನು ಆರಿಸಲಾಯಿತು.