ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಎಲ್ಲ ವಿಧದ ಅಟೋ ರಿಕ್ಷಾಗಳಿಗೆ ಅಟೋ ರಿಕ್ಷಾದ ಮಧ್ಯ ಭಾಗ ದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯಬೇಕಾಗುತ್ತದೆ.
(ಇ-ಆಟೋ ರಿಕ್ಷಾಗಳು ಒಳಗೊಂಡಂತೆ)ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾ ಒಳಗೊಂಡಂತೆ ಅನ್ವಯವಾಗಲಿದೆ.
ವಲಯ 1ಕ್ಕೆ ಚೌಕಾಕೃತಿ ಆಕಾರದ ಆಕಾಶ ನೀಲಿ ಬಣ್ಣ, ವಲಯ 2ಕ್ಕೆ ವೃತ್ತಾಕಾರದ ಹಳದಿ ಬಣ್ಣದ ಸ್ಟಿಕ್ಕರ್/ಗುರುತಿನ ಸಂಖ್ಯೆಯನ್ನು ಪೊಲೀಸ್ ಇಲಾಖಾ ವತಿಯಿಂದ ಪಡೆದು ಅಂಟಿಸಿಕೊಳ್ಳಬೇಕಾಗುತ್ತದೆ.ಆಟೋ ರಿಕ್ಷಾದ ಮಧ್ಯ ಭಾಗದಿಂದ ಮೇಲೆ ಹಳದಿ ಬಣ್ಣವನ್ನು ಬಳಿಯಬೇಕು. ಇದು ವಲಯ 1 ಮತ್ತು ವಲಯ 2 ಕ್ಕೂ ಅನ್ವಯವಾಗುತ್ತದೆ. ಫೆ. 20 ಕೊನೆಯ ದಿನಾಂಕವಾಗಿದೆ.