ನ್ಯೂಸ್ ನಾಟೌಟ್ : ಮೊನ್ನೆಯಷ್ಟೇ ಕನ್ನಡ ಚಲನಚಿತ್ರರಂಗದ ಹೆಸರಾಂತ ನಟಿ ಪ್ರೇಮಾ ಅವರು ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಬಾರಿ ವೈರಲ್ ಆಗಿತ್ತು.ಇದಕ್ಕಾಗಿ ತುಳುನಾಡಿನ ಆರಾಧ್ಯ ದೈವಗಳಲ್ಲಿ ಒಂದಾದ ಕೊರಗಜ್ಜನ ಬಳಿ ಪ್ರಾರ್ಥನೆ ಮಾಡಿದ್ದಾರೆ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿತ್ತು.ಇದಕ್ಕೀಗ ನಟಿ ಪ್ರೇಮಾ ಅವರು ಪ್ರತಿಕ್ರಿಯಿದ್ದಾರೆ.
ಮದುವೆ ಬಗ್ಗೆ ಪ್ರಸ್ತಾಪಿಸಿಲ್ಲ:
ಮಾಧ್ಯಮದ ಜತೆ ಮಾತನಾಡಿದ ಅವರು 2ನೇ ಮದುವೆ ವಿಚಾರ ಪ್ರಸ್ತಾಪ ಮಾಡಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. 2ನೇ ಮದುವೆ ವಿಚಾರ ವೈರಲ್ ಆಗಿರುವ ಬಗ್ಗೆ ಅಸಮಾಧಾನ ಹೊರಹಾಕಿರುವ ಪ್ರೇಮಾ, ‘ದೇವಸ್ಥಾನಕ್ಕೆ ಹೋಗುವುದು ತಪ್ಪೆ?ತುಂಬಾ ದಿನಗಳ ನಂತರ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದೆ. ಸ್ನೇಹಿತೆಯ ಮದುವೆಗೆ ಹೋಗಿ ಅಲ್ಲಿಂದ ದೇವರ ದರ್ಶನ ಮಾಡಿದೆ. ಅಲ್ಲಿ ನಾನು ನನ್ನ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ.’ಎಂದು ಪ್ರೇಮಾ ಸ್ಪಷ್ಟನೆ ನೀಡಿದ್ದಾರೆ.
ಅಭಿಮಾನಿಗಳ ಗಮನಕ್ಕೆ ತರುತ್ತೇನೆ
ಅಭಿಮಾನಿಗಳ ಗಮನಕ್ಕೆ ತಾರದೇ ಈ ಕೆಲಸವನ್ನು ನಾನು ಮಾಡಲ್ಲ.ನಾನು ಸಾಧಿಸಬೇಕು.ಒಂದು ವೇಳೆ ಮದುವೆ ಇದೆ ಅಂತಾದರೆ ಕುಟುಂಬದೊಂದಿಗೆ ಚರ್ಚಿಸಿ,ಅಭಿಮಾನಿಗಳ ಗಮನಕ್ಕೆ ತರುತ್ತೇನೆ ಎಂದು ಮದುವೆ ಕುರಿತಾದ ವದಂತಿಗಳಿಗೆ ಬ್ರೇಕ್ ಹಾಕಿದರು.
ತೆರೆಮೇಲೆ ನೋಡಲು ಕಾತುರ:
ನಟಿ ಪ್ರೇಮಾ ಅವರು ನಟನೆಯಿಂದ ದೂರ ಉಳಿದ್ದಿದ್ದಾರೆ. 2017ರಲ್ಲಿ ತೆರೆ ಕಂಡ ‘ಉಪೇಂದ್ರ ಮತ್ತೆ ಹುಟ್ಟಿ ಬಾ’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಾಣಲಿಲ್ಲ. ಬಳಿಕ ಮತ್ತೆ ಯಾವ ಸಿನಿಮಾದಲ್ಲಿಯೂ ಪ್ರೇಮಾ ನಟಿಸಿಲ್ಲ. ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇನ್ನೂ ಬಹಿರಂಗ ಪಡಿಸಿಲ್ಲ. ಪ್ರೇಮಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿರುವುದಂತು ಸುಳ್ಳಲ್ಲ.