ನ್ಯೂಸ್ ನಾಟೌಟ್ : ವಿಜ್ಞಾನಿಗಳ ಸಂಶೋಧನೆಯಲ್ಲಿ ವಿಚಿತ್ರ ಮತ್ತು ಕುತೂಹಲಕಾರಿ ವಿಷಯವೊಂದು ಬಯಲಾಗಿದೆ. ಮಧ್ಯಪ್ರದೇಶದ ಧರ್ ಜಿಲ್ಲೆಯ ಬಾಘ ಮತ್ತು ಕುಕ್ಷಿ ಪ್ರದೇಶದಲ್ಲಿರುವ ನರ್ಮದಾ ನದೀ ಕಣಿವೆಯಲ್ಲಿ; ಡೈನೋಸಾರ್ ಮತ್ತು ಟೈಟನೊಸಾರ್ಗಳ 256 ಮೊಟ್ಟೆಗಳು ಪತ್ತೆಯಾಗಿವೆ. ಹಾಗೆಯೇ ಡೈನೊಸಾರ್ಗಳ ಬೃಹತ್ ಗೂಡುಗಳೂ ಕಂಡುಬಂದಿವೆ.
2017ರಿಂದ 2020ರವರೆಗೆ ದೆಹಲಿ ವಿವಿ ಮತ್ತು ಐಐಎಸ್ಇಆರ್ನ ಕೋಲ್ಕತ-ಭೋಪಾಲ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ಕುತೂಹಲಕಾರಿ ಸಂಗತಿಗಳು ಪತ್ತೆಯಾಗಿವೆ. ಈ ಅಂಶ “ಪಿಎಲ್ಒಎಸ್’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
ಹರ್ಷ ಧಿಮಾನ್, ವಿಶಾಲ್ ವರ್ಮ, ಗುಂಟುಪಳ್ಳಿ ಪ್ರಸಾದ್ ಈ ಶೋಧದಲ್ಲಿ ಪಾಲ್ಗೊಂಡಿದ್ದಾರೆ.ಟೆಥಿಸ್ ಸಮುದ್ರ ಮತ್ತು ನರ್ಮದಾ ನದಿಗಳು ಸಂಗಮಿಸುವ ಪ್ರದೇಶದಲ್ಲಿ ಡೈನೋಸಾರ್ಗಳ ಮೊಟ್ಟೆಗಳು ಕಂಡುಬಂದಿವೆ. ಒಂದು ಕಾಲದಲ್ಲಿ ಪೂರ್ವ ಆಫ್ರಿಕಾದ ದ್ವೀಪಗಳ ರಾಷ್ಟ್ರ ಸೀಶೆಲ್ಸ್ ಭಾರತಕ್ಕೆ ಅಂಟಿಕೊಂಡಿತ್ತು. ಕಾಲಕ್ರಮೇಣ ಅದು ದೂರಸರಿಯಿತು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.