ನ್ಯೂಸ್ ನಾಟೌಟ್ :ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ ಸಂಸ್ಮರಣೆಯ ಅದ್ದೂರಿ ಶೋಭಾಯಾತ್ರೆಯು ಬೆಳಿಗ್ಗೆ ಪುತ್ತೂರಿನ ದರ್ಬೆಯಿಂದ ಆರಂಭಗೊಂಡಿತು.ಮೆರವಣಿಗೆಯುಲ್ಲಿ 10 ಸ್ತಬ್ದ ಚಿತ್ರಗಳು, 37 ವಿವಿಧ ನೃತ್ಯ ತಂಡಗಳು, ಜನಪದ ಕಲೆಗಳ ಪ್ರದರ್ಶನ ಶೋಭಾಯಾತ್ರೆಯು ಕಣ್ಮನ ಸೆಳೆಯಿತು.
ಕಣ್ಮನ ಸೆಳೆದ ಶೋಭಾಯಾತ್ರೆ:
ಭಾರತಮಾತ ಅಲಂಕೃತ ವಾಹನ, ಚೆಂಡೆ, ಭಗವಾಧ್ವಜ, ಕೊಡೆಗಳು, ಭಜನಾ ತಂಡ, ಸ್ವಾಮೀಜಿ ಪ್ರತಿಮೆ ಇರುವ ರಥ ಗಮನ ಸೆಳೆದವು.ಸಾವಿರಾರು ಸಂಖ್ಯೆಯಲ್ಲಿ ನೆರೆದ ಜನರು ಈ ವೈಭವ ನೋಡಿ ಕಣ್ತುಂಬಿಕೊಂಡರು.ನಾದಸ್ವರ, ಬಣ್ಣ ಬಣ್ಣದ ಕೊಡೆಗಳು, ಗೊಂಬೆಗಳು, ಬ್ಯಾಂಡ್ಸೆಟ್, ಕೊಡಗು ನೃತ್ಯ, ಸ್ತಬ್ದ ಚಿತ್ರಗಳು ಈ ಒಂದು ಸಂಭ್ರಮಕ್ಕೆ ಸಾಕ್ಷಿಯಾಯಿತು.ವೀರಗಾಸೆ ನೃತ್ಯ, ಕಂಸಾಲೆ, ಡೊಳ್ಳುಕುಣಿತ, ಸಪ್ತವರ್ಣದ ಸೀರೆಯುಟ್ಟ ನಾರಿಯರ ಸಪ್ತ ಗುಂಪುಗಳು ಕಾಲಭೈರವೇಶ್ವರ ಮತ್ತು ಅಮ್ಮನವರ ರಥ, ಯಾತ್ರೆಯುದ್ದಕ್ಕೂ ಸಾಗರೋಪಾದಿ ಸಂಖ್ಯೆಯಲ್ಲಿ ಜನ ಸೇರಿದ್ದು,ಈ ವೈಭವಕ್ಕೆ ಸಾಕ್ಷಿಯಾದರು.
ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ, ಶ್ರೀ ಧರ್ಮಪಾಲನಾಥ ಸ್ವಾಮೀಜಿ , ಡಿ.ಕೆ ಶಿವಕುಮಾರ್ , ಡಿ.ವಿ ಸದಾನಂದ ಗೌಡ , ಸಂಜೀವ ಮಠಂದೂರು ಸೇರಿದಂತೆ ಅಗ್ರಗಣ್ಯ ನಾಯಕರು ಇದ್ದರು.