ನ್ಯೂಸ್ ನಾಟೌಟ್ :ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇಂದು ನಿನ್ನೆಯ ವಿಷಯವಲ್ಲ.ಇತ್ತೀಚೆಗಂತು ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು,ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.೧ ಕಿ.ಮೀ ದೂರ ಪ್ರಯಾಣಿಸಬೇಕಾದರೆ ೪೫ ನಿಮಿಷ ತೆಗೆದುಕೊಂಡ ಉದಾಹರಣೆಗಳೂ ಇವೆ.ಇನ್ನು ಆಫಿಸ್ ಕೆಲಸಕ್ಕೆ ಹೋಗುವವರ ಪಾಡು ಹೇಳತೀರದು.ಇದರ ಮಧ್ಯೆ ಎಮ್ಮೆಗಳು ರೋಡ್ ನಲ್ಲಿ ಅಡ್ಡ ಬಂದರೆ ದೇವರೆ ಗತಿ, ಇನ್ನೂ ೧೦ ನಿಮಿಷ ಜಾಸ್ತಿ ಕಾಯಬೇಕಾಗುತ್ತದೆ.ಅದಕ್ಕಾಗಿ ಇದೇ ಮೊದಲ ಬಾರಿ ಟೆಕ್ಕಿಗಳು ಎಮ್ಮೆಗಳ ವಿರುದ್ದ ಪೊಲೀಸ್ ಕಂಪ್ಲೆಂಟ್ ನೀಡಿದ್ದಾರೆ!
ಎಮ್ಮೆಗಳ ವಿರುದ್ಧವೇ ಕಂಪ್ಲೆಟ್ :
ಹೌದು , ಎಮ್ಮೆಗಳು ತೊಂದರೆ ಕೊಡುತ್ತಿವೆ ಎಂದು ಬೆಂಗಳೂರಿನ ಎಮ್ಮೆಗಳ ವಿರುದ್ಧ ಟೆಕ್ಕಿಗಳು ದೂರು ನೀಡಿದ್ದಾರೆ. ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಬೆಳಿಗ್ಗೆ ಆಫೀಸ್ಗೆ ಹೋಗುವಾಗ ನಗರದ ಕಸವನಹಳ್ಳಿ ರೋಡ್ನಲ್ಲಿ ಪ್ರತಿನಿತ್ಯ ಎಮ್ಮೆಗಳು ಸರತಿ ಸಾಲಿನಲ್ಲಿ ರೋಡ್ನಲ್ಲಿ ಹೋಗುತ್ತಿವೆ. ಇದರಿಂದ ದಿನನಿತ್ಯ 45 ನಿಮಿಷ ಟ್ರಾಫಿಕ್ ಜಾಮ್ ಆಗುತ್ತಿದ್ದು, ಟೆಕ್ಕಿಗಳು ಹೈರಾಣಾಗಿ ಹೋಗಿದ್ದಾರೆ.ಇದರಿಂದ ರೋಸಿ ಹೋದ ಟೆಕ್ಕಿಗಳು ಉಪದ್ರ ಮಾಡುತ್ತಿರುವ ಎಮ್ಮೆಗಳ ವಿರುದ್ಧವೇ ಕಂಪ್ಲೆಟ್ ಕೊಟ್ಟಿದ್ದಾರೆ.
ಈ ಹಿನ್ನೆಲೆ MNC ಟೆಕ್ಕಿಗಳು ಕಳೆದ 6-7 ತಿಂಗಳಿಂದ ಎಮ್ಮೆ ಸಮ್ಯಸೆಯಿಂದ. ಎಮ್ಮೆಗಳಿಂದ ಟ್ರಾಫಿಕ್ ಜಾಮ್ ಆಗಿ ಆಫೀಸ್ಗೆ ನಿತ್ಯ ತಡವಾಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಿ ಅಂತ ಟ್ವಿಟ್ಟರ್ ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.