ನ್ಯೂಸ್ ನಾಟೌಟ್ : ಕೊಡಗಿನ ಮೂಲದ ಮಹಿಳೆಯೊಬ್ಬರು ಕುವೈಟ್ ನಲ್ಲಿದ್ದು, ಚಿತ್ರ ಹಿಂಸೆ ಅನುಭವಿಸುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ. ಏಜೆಂಟ್ ಮೂಲಕ ಇವರು ಇತ್ತೀಚೆಗೆ ಕುವೈಟ್ ಗೆ ಪ್ರಯಾಣ ಬೆಳೆಸಿದ್ದರು .ಇದೀಗ ಅಲ್ಲಿ ತಾನು ಕಷ್ಟ ಪಡುತ್ತಿರುವ ಬಗ್ಗೆ ಮಾಧ್ಯಮವೊಂದಕ್ಕೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗೃಹ ಬಂಧನ?
32 ವರ್ಷದ ಈ ಮಹಿಳೆ ಕುವೈಟ್ ಗೆ ತೆರಳಿ ಪಡಬಾರದ ಯಾತನೆ ಅನುಭವಿಸುತ್ತಿದ್ದಾರೆ.ನಾನು ಸೇರಿದಂತೆ ಐವರು ಮಹಿಳೆಯರನ್ನು ಒಂದು ಹಾಸ್ಟೆಲ್ ಕೊಠಡಿಯಲ್ಲಿ ಕೂಡಿ ಹಾಕಲಾಗಿದ್ದು, ಯಾರನ್ನೂ ಸಂಪರ್ಕಿಸಲು ಅವಕಾಶವಿಲ್ಲವೆಂದು ಹೇಳಿದ್ದಾರೆನ್ನುವ ಮಾಹಿತಿ ಹೊರಬಿದ್ದಿದೆ. ಸದ್ಯ ಆಕೆಯ ಮನೆಯವರು ಕೊಡಗು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಜಿಲ್ಲಾಡಳಿತ ಈಗಾಗಲೇ ಕುವೈಟ್ ಭಾರತೀಯ ರಾಯಭಾರಿ ಕಚೇರಿಗೂ ಸಂಪರ್ಕಿಸಿ ಪಾರ್ವತಿಯ ಸ್ಥಿತಿಗತಿಯ ಬಗ್ಗೆ ವಿಚಾರಿಸಲು ಮನವಿ ಮಾಡಿದೆ ಎಂದು ಹೇಳಲಾಗುತ್ತಿದೆ.
ಸುರಕ್ಷಿತವಾಗಿ ಕರೆತರುವ ಪ್ರಯತ್ನ
ಸದ್ಯ ಬೆಳವಣಿಗೆಯ ಹಂತದಲ್ಲಿದೆ.ಪಾರ್ವತಿ ಅವರ ತಾಯಿ ಚಿಕ್ಕಿ ಅವರ ಮನವಿ ಸ್ವೀಕರಿಸಿದ ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತವಾಗಿದೆ. ಜಿಲ್ಲಾಧಿಕಾರಿ ಬಿ.ಸಿ ಸತೀಶ ಅವರ ನಿರ್ದೇಶನದ ಮೇರೆಗೆ ಪಾರ್ವತಿಯನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ವಾಸುದೇವ್ ಅವರಿಗೆ ವಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಧೈರ್ಯ ತುಂಬಿದ ಅಧಿಕಾರಿ
ಸದ್ಯ ಅವರನ್ನು ಕೊಡಗಿನತ್ತ ಕರೆತರುವುದಕ್ಕೆ ಎಲ್ಲಾ ರೀತಿಯ ಪ್ರಯತ್ನಗಳು ನಡಿತಿವೆ.ಜತೆಗೆ ಅವರಿಗೆ ಧೈರ್ಯ ತುಂಬುವ ಕೆಲಸಗಳು ಆಗುತ್ತಿವೆ.ಮಾನಸಿಕವಾಗಿ ನೊಂದಿರುವ ಅವರಿಗೆ ತವರಿಗೆ ಆಗಮಿಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುವುದಕ್ಕಾಗಿ ಸಿದ್ಧತೆಗಳು ನಡಿತಿವೆ. ಕುವೈಟ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿಯನ್ನು ನೀಡಲಾಗಿದೆ.ಸಂತ್ರಸ್ತೆಯನ್ನು ಸುರಕ್ಷಿತವಾಗಿ ಕರೆತರುವುದಕ್ಕೆ ಏನೆಲ್ಲಾ ನಿಯಮಗಳಿವೆಯೋ ಅವುಗಳ ಪ್ರಕ್ರಿಯೆಗಳು ನಡಿತಿವೆ.
ಮಹಿಳೆ ಅಲ್ಲಿಗೆ ಹೋಗಿದ್ಯಾಕೆ?
ಮಧ್ಯಮ ಕುಟುಂಬದ ಮಹಿಳೆ ಕೆಲಸವನ್ನರಸುತ್ತಿದ್ದರು.ಮೂಲತಃ ಕೊಡಗು ಜಿಲ್ಲೆ ಕುಶಾಲನಗರ ತಾಲೂಕು ನೆಲ್ಲಿಹುದಿಕೇರಿ ಗ್ರಾಮದ ಕರಡಿಗೋಡು ನಿವಾಸಿ. ಚಿಕ್ಕಿ ಎಂಬುವವರ ಪುತ್ರಿ. ಹೆಸರು ಪಾರ್ವತಿ. ಮೊದಲಿಗೆ ಕೇರಳದ ಕಣ್ಣೂರು ಜಿಲ್ಲೆಯ ತಲಚೇರಿಯಲ್ಲಿ ಮನೆ ಕೆಲಸಕ್ಕೆ ಸೇರಿದ್ದರು. ಅಲ್ಲಿ ತಮಿಳುನಾಡು ಮೂಲದ ಏಜೆಂಟ್ ಹನೀಫ್ ಅವರ ಭೇಟಿಯಾಗುತ್ತದೆ. ಅವರ ಮೂಲಕ ವಿದೇಶದಲ್ಲಿ ಮನೆ ಕೆಲಸ ಮಾಡಲು ಕಳೆದ ಸೆಪ್ಟೆಂಬರ್ 3ರಂದು ಕರಡಿಗೋಡಿನಿಂದ ಹೊರಟು ಸೆಪ್ಟೆಂಬರ್ 4ಕ್ಕೆ ಕುವೈಟ್ಗೆ ತೆರಳಿದ್ದರು. ಅಲ್ಲಿ ಭಾರತದ ಏಜೆಂಟ್ ಮೂಲಕ ಕುವೈಟ್ನ ಶ್ರೀಲಂಕಾದ ಏಜೆಂಟ್ ಸಮೀರ್ ಎಂಬಾತನನ್ನು ಸಂಪರ್ಕಿಸಿ ಕೆಲಸಕ್ಕೆ ಸೇರಿದ್ದರು.