ನ್ಯೂಸ್ ನಾಟೌಟ್ : ದ.ಕ ಜಿಲ್ಲಾ ಯುವ ಜನ ಮೇಳ ೨೦೨೨-೨೦೨೩ ಪ್ರಯುಕ್ತ ನಡೆದ ಮೆರವಣಿಗೆಗೆ ಇಂದು ಅದ್ದೂರಿ ಚಾಲನೆ ನೀಡಲಾಯಿತು.ಇಂದು ಬೆಳಗ್ಗೆ ೧೦.೩೦ಕ್ಕೆ ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣಿಗೆ ಆರಂಭಗೊಂಡಿತು.ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮೆರವಣಿಗೆಗೆ ಚಾಲನೆ ನೀಡಿದರು.ಇಂದಿನಿಂದ ಎರಡು ದಿನಗಳ ಕಾಲ ದ.ಕ ಜಿಲ್ಲಾ ಯುವ ಜನ ಮೇಳ ಸಂಭ್ರಮದಿಂದ ನಡೆಯಲಿದ್ದು,ಸಾಂಸ್ಕೃತಿಕ ಸ್ಪರ್ಧೆಗಳ ಜತೆಯಲ್ಲಿ ವಸ್ತು ಪ್ರದರ್ಶನ,ಆಹಾರ ಮೇಳ,ಸಾಂಸ್ಕೃತಿಕ ವೈಭವವೂ ಇರಲಿದೆ.
ವಿವಿಧ ಕಾರ್ಯಕ್ರಮಗಳ ಉದ್ಘಾಟನೆ:
ಧ್ವಜಾರೋಹಣವನ್ನು ಹಾಗೂ ಸರ್ಧಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಯುವಜನ ಸಂಯುಕ್ತ ಮಂಡಳಿ ಸ್ಥಾಪಕಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ನೆರವೇರಿಸಿದರು.ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಾದ ಭವಾನಿಶಂಕರ್ ಎನ್. ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ನೆರವೇರಸಿದರು.ಆಹಾರ ಮೇಳದ ಉದ್ಘಾಟನೆಯನ್ನು ಸುಳ್ಯ ತಹಶೀಲ್ದಾರ್ ಕು.ಅನಿತಾಲಕ್ಷ್ಮೀ ನೆರವೇರಸಿದರು.
ಸಂಜೆ ೬.೩೦ಕ್ಕೆ ಉದ್ಘಾಟನೆ:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ತಾಲೂಕು ಪಂಚಾಯತ್ ಸುಳ್ಯ , ನಗರ ಪಂಚಾಯತ್ ಸುಳ್ಯ ಮತ್ತು ದ.ಕ. ಜಿಲ್ಲಾ ಯುವಜನ ಒಕ್ಕೂಟ ಇವರ ಜಂಟಿ ಸಂಯುಕ್ತ ಆಶ್ರಯದಲ್ಲಿ ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇವರ ಆತಿಥ್ಯದಲ್ಲಿ ಸುಳ್ಯ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ರಂಗಮಂದಿರ ಯುವಜನ ಸಂಯುಕ್ತ ಮಂಡಳಿ(ರಿ.)ಆವರಣದಲ್ಲಿ ಯುವಜನ ಮೇಳ ಸಂಜೆ ೬.೩೦ಕ್ಕೆ ಉದ್ಘಾಟನೆಗೊಳ್ಳಲಿದೆ.
ಜ.೨೧ರ ಉದ್ಘಾಟನಾ ಸಮಾರಂಭ:
ಇಂದು ಸಂಜೆ ಉದ್ಘಾಟನೆ ನಡೆಯಲಿದ್ದು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ವಿ. ಉದ್ಘಾಟನೆ ನೆರವೇರಿಸಲಿದ್ದಾರೆ.ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ.ಸಂಸದ ನಳೀನ್ ಕುಮಾರ್ ಕಟೀಲ್ , ಸಚಿವ ಕೋಟ ಶ್ರೀನಿವಾಸ್ ಪೂಜಾರಿ , ರಾಜ್ಯ ಸಭಾ ಸದಸ್ಯರಾದ ಡಾ|ಡಿ.ವೀರೇಂದ್ರ ಹೆಗ್ಗಡೆ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಜ.೨೨ರ ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭ ನಡೆಯಲಿದ್ದು ನ.ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.ಬಹುಮಾನ ವಿತರಣೆ ನಡೆಯಲಿದೆ.ನ.ಪಂ.ಸದಸ್ಯ ಕಿಶೋರಿ ಶೇಟ್ ಬಹುಮಾನ ವಿತರಿಸಲಿದ್ದಾರೆ.ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಮೆರವಣಿಗೆ : ಯುವಕ ಮಂಡಲಕ್ಕೆ ಬಹುಮಾನ:
ಮೆರವಣಿಗೆಯಲ್ಲಿ ಸಮವಸ್ತ್ರ , ಶಿಸ್ತುಬದ್ಧ ಹಾಗೂ ಅತೀ ಹೆಚ್ಚು ಸದಸ್ಯರು ಭಾಗವಹಿಸುವ ಯುವಕ ಮಂಡಲಕ್ಕೆ ಬಹುಮಾನ ನೀಡಲಾಗುತ್ತದೆ.ಪ್ರಥಮ ೩೦೦೦ , ದ್ವಿತೀಯ ೨೦೦೦ ಹಾಗೂ ತೃತೀಯ ೧೦೦೦ ನಗದು ಇರಲಿದ್ದು,ಶಾಶ್ವತ ಫಲಕ ನೀಡಿ ಗೌರವವನ್ನು ನೀಡಲಾಗುತ್ತಿದೆ.
ಸಾಂಸ್ಕೃತಿಕ ವೈಭವ
ಜ.೨೨ರ೦ದು ಸ೦ಜೆ ವಿಸ್ಮಯ ವಿನಾಯಕ್ ಕನ್ನಡ, ತುಳು ಚಲನಚಿತ್ರ ನಟ ಹಾಸ್ಯ ಕಲಾವಿದ ರಿಂದ ಕಾಮಿಡಿ ಶೋ, ಗಾನನೃತ್ಯ ಅಕಾಡೆಮಿ ಸುಳ್ಯ ತಂಡ ದಿ೦ದ ನೃತ್ಯ ವೈಭವ, ಶೌರ್ಯ ಯುವತಿ ಮಂಡಲ ಪೈಲಾರು ನೃತ್ಯ ತ೦ಡ, ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಮೇಶ್ ಮೆಟ್ಟಿನಡ್ಕ ಹಾಗೂ ಶುಭದಾ ಆರ್. ಪ್ರಕಾಶ್ ಇವರಿಂದ ಗಾನ ವೈಭವ ನಡೆಯಲಿದೆ.