ನ್ಯೂಸ್ ನಾಟೌಟ್ : ಸುಳ್ಯ ಕೆವಿಜಿ ದಂತ ಮಹಾ ವಿದ್ಯಾಲಯದಲ್ಲಿ ಪದವಿ ಪ್ರದಾನ ಹಾಗು ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ಅಮರಜ್ಯೋತಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.
ಸುಳ್ಯ ಕೆವಿಜಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಹಾಗೂ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿರುವುದು ಹೆಮ್ಮೆಯ ವಿಚಾರ. ಅವರು ರ್ಯಾಂಕ್ ಪಡೆದಾಗ ಕಾಲೇಜ್ ಗೆ ಹೆಮ್ಮೆ ಅನಿಸುತ್ತಿದೆ. ಸಮಾಜದಲ್ಲಿ ಹೀಗೆ ವಿದ್ಯಾರ್ಥಿಗಳು ಗುರುತಿಸಿಕೊಂಡಾಗ ಅವರಿಗೂ ಸಾಧಿಸಬೇಕೆಂಬ ಛಲ ಮೂಡುತ್ತದೆ. ಇದೀಗ ಕೆವಿಜಿಯ ಕನಸು ನನಸಾಗಿದೆ. ಯಾವುದೇ ಸವಾಲುಗಳು ಬಂದರೆ ಅದನ್ನು ಎದುರಿಸಬೇಕು ವಿದ್ಯಾರ್ಥಿಗಳು ಸಮಾಜದಲ್ಲಿ ಗುರುತಿಸುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಗೌರವಾನ್ವಿತ ಸದಸ್ಯ ಹಾಗೂ ರಾಜಸ್ಥಾನ ಉದಯಪುರದ ಪೆಸಿಫಿಕ್ ದಂತ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಭಗವಂದಾಸ್ ರೈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಬಳಿಕ ಮಾತನಾಡಿದ ಅವರು ಇಂದು ವಿದ್ಯಾರ್ಥಿಗಳಿಗೆ ತುಂಬಾ ಹೆಮ್ಮೆಯ ದಿನವಾಗಿದೆ. ತಮ್ಮ ಮಕ್ಕಳ ಬಗ್ಗೆ ಪೋಷಕರಿಗೆ ಹೆಮ್ಮೆ ಅನಿಸುತ್ತಿದೆ.ಕಲಿಕೆಯ ಪ್ರಯಾಣವು ಮೈಲಿಗಲ್ಲಿನ ಹಾಗೇ ಇರಬೇಕು. ಜೀವನದಲ್ಲಿ ಎಲ್ಲಾ ಕಡೆ ಹಣವೇ ಮುಖ್ಯವಲ್ಲ.ಸಮಾಜದಲ್ಲಿ ಜನರ ಸೇವೆ ಸಲ್ಲಿಸುವುದು ವ್ಯೆದ್ಯರ ಕರ್ತವ್ಯವಾಗಿದೆ. ಮೊದಲು ಶಿಕ್ಷಣ ಮತ್ತು ಜ್ಞಾನ ಅಗತ್ಯ. ಅದಕ್ಕೆ ಏಕಾಗ್ರತೆ ಇದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯ ಎಂದು ಹೇಳಿ ವಿದ್ಯಾರ್ಥಿಗಳಿಗೆ ಆಶಿಸಿದರು.
ಪದವಿಪ್ರದಾನ:
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ಹಾಗು ರಾಜಸ್ಥಾನ ಉಯಪುರ ಫೆಸಿಫಿಕ್ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಭಗವಾನ್ದಾಸ್ ರೈ, ಕೆವಿಜಿ ಚಾರಿಟೇಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಹಾಗು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ, ಕೆವಿಜಿ ಚಾರಿಟೇಬಲ್ ಟ್ರಸ್ಟಿ ಡಾ.ಜ್ಯೋತಿ ಆರ್.ಪ್ರಸಾದ್, ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಊರುಬೈಲು, ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್ ಅವರು ಪದವಿ ಪ್ರದಾನ ಮಾಡಿದರು.
ಸನ್ಮಾನ:
ಡಾ.ಭಗವಾನ್ದಾಸ್ ರೈ ಹಾಗು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಎಕ್ಸಿಕ್ಯುಟಿವ್ ಸದಸ್ಯರಾಗಿ ಆಯ್ಕೆಯಾದ ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಊರುಬೈಲು ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿವಿಧ ವಿಭಾಗಗಳ ಸಾಧಕರನ್ನು ಗೌರವಿಸಲಾಯಿತು.ದಂತ ಶಸ್ತ್ರಚಿಕಿತ್ಸೆಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ.ಶರತ್ಕುಮಾರ್ ಶೆಟ್ಟಿ, ಕೆವಿಜಿ ದಂತ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಎನ್.ಎ.ರಾಮಚಂದ್ರ, ಡಾ.ಕೃಷ್ಣಪ್ರಸಾದ್, ಡಾ.ಮನೋಜ್ ಕುಮಾರ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ದಯಾಕರ್, ಡಾ.ನುಸ್ರತ್ ಫರೀದ್, ಡಾ.ಜಯಪ್ರಸಾದ್ ಆನೆಕಾರ್, ಡಾ.ಸುಹಾಸ್ ರಾವ್,ಡಾ.ಶೈಲಾ ಪೈ, ಡಾ.ಪ್ರಸನ್ನಕುಮಾರ್, ಡಾ.ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.