ನ್ಯೂಸ್ ನಾಟೌಟ್ : ತಿಂಗಳ ಹಿಂದೆ ನಾಪತ್ತೆಯಾಗಿದ್ದ ಹಾಗೂ ಸುಳ್ಯದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೇರಳದಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ.ಮೂಲತಃ ಬಂಟ್ವಾಳದ ವಾಮಪದವು ನಿವಾಸಿಯಾಗಿದ್ದ ನಾಗೇಶ್ ಎಂಬವರು ಸುಳ್ಯದ ಫುಡ್ ಪಾಯಿಂಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಏನಿದು ಘಟನೆ?
33 ವರ್ಷದ ನಾಗೇಶ್ ಎಂಬವರು ಕ್ಯಾಂಟೀನ್ ನಲ್ಲಿ ಊಟ ಮುಗಿಸಿ ರೂಮಿಗೆ ಹೋಗುತ್ತೇನೆ ಎಂದು ಹೇಳಿ ತೆರಳಿದ್ದರು. ಮತ್ತೆ ರೂಂನಿಂದ ಪೇಟೆಗೆ ಹೋಗುತ್ತೇನೆ ಎಂದವರು ಮರಳಿ ಬಾರದೆ ನಾಪತ್ತೆಯಾಗಿದ್ದರು.ಎಲ್ಲಾ ಕಡೆ ಅವರನ್ನು ಹುಡುಕಲಾಯಿತು.ಕುಟುಂಬಸ್ಥರು, ಸಂಬಂಧ ಪಟ್ಟವರಲ್ಲಿ ವಿಚಾರಿಸಲಾಯಿತು. ಆದರೆ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.ಈ ಬಗ್ಗೆ ಅವರ ಪತ್ನಿ ಗೀತಾ ಎಂಬುವವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಈ ದೂರಿನನ್ವಯ ಅವರ ಪತಿ ನಾಗೆಶ್ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಲಾರಂಭಿಸಿದರು.ನಾಗೇಶ್ ಕಾಸರಗೋಡು ಸೀತಾಂಗೊಳ್ಳಿಯಲ್ಲಿ ತೋಟ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸುಳಿವು ಸಿಕ್ಕಿತು.ಕೂಡಲೇ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ತೆರಳಿದ್ದಾರೆ. ನಾಗೇಶ್ ಅವರನ್ನು ಸುಳ್ಯ ಠಾಣೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅವರ ಮನೆಯವರನ್ನು ಕರೆಯಿಸಿ ಅವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.