ನ್ಯೂಸ್ ನಾಟೌಟ್: ಐತಿಹಾಸಿಕ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಬೆಂಗಳೂರಿನ ಗವಿಗಂಗಾಧರೇಶ್ವರನ ದೇವಸ್ಥಾನವೂ ಒಂದು. ಉತ್ತರಾಯಣದ ಪುಣ್ಯ ಕಾಲದ ಮಕರ ಸಂಕ್ರಾಂತಿಯಂದು ಈ ದೇಗುಲ ಸೂರ್ಯ ರಶ್ಮಿಯ ಸ್ಪರ್ಶದ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ವರ್ಷ ಸಾವಿರಾರು ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
ಮಕರ ಸಂಕ್ರಾಂತಿಯ ಇಂದು ಸಂಜೆ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೆ ಬೆಂಗಳೂರಿನಲ್ಲಿ ಭಕ್ತ ಸಮೂಹ ಕಾತರದಿಂದ ಕಾದಿದ್ದರು. ಅಂತಿಮವಾಗಿ ಸೂರ್ಯ ರಶ್ಮಿ ಗವಿ ಗಂಗಾಧರೇಶ್ವರನ ಆಲಯಕ್ಕೆ ಪ್ರವೇಶಿಸುತ್ತಿದ್ದಂತೆ ಸಾವಿರಾರು ಭಕ್ತರು ಜೈಕಾರ ಕೂಗಿದರು.
ಬೆಂಗಳೂರಿನ ಗವಿಪುರಂನ ಗುಟ್ಟಹಳ್ಳಿಯಲ್ಲಿ ಈ ದೇವಾಲಯವಿದೆ. ಇದೇ ಕಾರಣದಿಂದ ಸಾಕಷ್ಟು ಭಕ್ತರು ಸದಾ ಗವಿಗಂಗಾಧರೇಶ್ವರನ ದರ್ಶನ ಪಡೆಯಲು ಈ ದೇಗುಲಕ್ಕೆ ಬರುತ್ತಾರೆ. ಒಂದು ಕಾಲದ ತಪೋಭೂಮಿ ಇದು. ಖುಷಿ, ಮುನಿಗಳ ಭೇಟಿಗೆ ಸಾಕ್ಷಿಯಾದ ಈ ಸ್ಥಳ ಇಂದಿಗೂ ತನ್ನ ಧಾರ್ಮಿಕ ಮಹತ್ವವನ್ನು ಉಳಿಸಿಕೊಂಡು ಅದೆಷ್ಟೋ ಭಕ್ತರ ಮನಸ್ಸಿಗೆ ನೆಮ್ಮದಿಯ ತಾಣವಾಗಿ ಗಮನ ಸೆಳೆಯುತ್ತಿದೆ. ಅದೇ ಪರ ಶಿವನ ಪವಿತ್ರ ಆಲಯ ಗವಿಗಂಗಾಧರೇಶ್ವರ ಕ್ಷೇತ್ರ.
ಶಿವ ಲಿಂಗಕ್ಕೆ ಕೆಲ ಕ್ಷಣಗಳ ಕಾಲ ಸೂರ್ಯ ರಶ್ಮಿ ವಿಶೇಷ ರೀತಿಯಲ್ಲಿ ಸ್ಪರ್ಶ ಮಾಡುವ ಸಂಕ್ರಮಣದ ಈ ಸೋಜುಗ ಸೂರ್ಯ ಮತ್ತು ಭೂಮಿಯ ಚಲನೆಯನ್ನು ನಿರ್ಧಿಷ್ಟವಾಗಿ ಅಧ್ಯಯನ ಮಾಡಿ ಅದನ್ನು ರೂಪಿಸಿದ ಭಾರತದ ಪೂರ್ವಜರ ಜ್ಞಾನ ಶಕ್ತಿಗೆ ಹಿಡಿದ ಕೈಗನ್ನಡಿ. ಸೌರಮಂಡಲದ ಅಂತಹ ಬದಲಾವಣೆಯ ಸೂಚಕವಾಗಿ ಪರ ಶಿವನ ಪವಿತ್ರ ಆಲಯ ಗವಿಗಂಗಾಧರೇಶ್ವರ ಕ್ಷೇತ್ರ ಸೂರ್ಯನ ಕಿರಣ ಶಿವಲಿಂಗ ಶಿರ ಭಾಗದಿಂದ ಪಾದದ ವರೆಗೆ ಬೆಳಕಿನ ಅಭಿಷೇಕ ಮಾಡುತ್ತದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ದೇವ ಸನ್ನಿಧಿ ಇದು. ಇದೇ ಕಾರಣದಿಂದ ಸಾಕಷ್ಟು ಭಕ್ತರು ಸದಾ ಗವಿಗಂಗಾಧರೇಶ್ವರನ ದರ್ಶನ ಪಡೆಯಲು ಈ ದೇಗುಲಕ್ಕೆ ಬರುತ್ತಾರೆ. ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಸುಸಂದರ್ಭವಿದು. ಇಲ್ಲಿಂದ ದಕ್ಷಿಣಾಯಣ ಮುಗಿದು ಉತ್ತರಾಯಣದ ಪುಣ್ಯಕಾಲ ಶುರುವಾಗುತ್ತದೆ, ಈ ಕಾಲಕ್ಕಾಗಿಯೇ ಶರಶಯ್ಯೆಯಲ್ಲಿ ಕಾದ ಭೀಷ್ಮರನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಇಲ್ಲಿ ನಮಗೆ ಉತ್ತರಾಯಣ ಕಾಲದ ಮಹತ್ವ ಮತ್ತು ವೈಜ್ಞಾನಿಕವಾಗಿ ಅಂದು ಹಿರಿಯರು ತಮ್ಮ ಜೀವನವನ್ನು ಕಟ್ಟಿಕೊಂಡ ಬಗೆಯನ್ನು ನಾವಿಲ್ಲಿ ಸ್ಮರಿಸಬಹುದು.