ನ್ಯೂಸ್ ನಾಟೌಟ್: ಕೇರಳದ ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮಕರಜ್ಯೋತಿ ಮೂಡುವ ಮೂಲಕ ಭಕ್ತ ಸಾಗರಕ್ಕೆ ಮಣಿಕಂಠ ಸ್ವಾಮಿ ದರ್ಶನ ನೀಡಿದ್ದಾನೆ.ಶ್ರೀ ಅಯ್ಯಪ್ಪಸ್ವಾಮಿಯ ಕ್ಷೇತ್ರವಾದ ಶಬರಿಮಲೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ವಿದ್ಯಮಾನಕ್ಕೆ ಇಂದು ಸಹಸ್ರಾರು ಭಕ್ತರು ಸಾಕ್ಷಿಯಾಗಿದರು.ಮಕರಜ್ಯೋತಿಯನ್ನು ಕಣ್ತುಂಬಿಕೊಳ್ಳಲು ನೆರೆದಿರುವ ಅಯ್ಯಪ್ಪ ಭಕ್ತರಿಗೆ ಇದೊಂದು ಸಂತಸದ ವಾತಾವರಣವನ್ನು ನಿರ್ಮಾಣ ಮಾಡಿದೆ.
ಐತಿಹಾಸಿಕ ಶಬರಿಮಲೆ ದೇಗುಲದಲ್ಲಿ ಮಕರಜ್ಯೋತಿ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಸಾಗರ ನೆರೆದಿತ್ತು. ಅಯ್ಯಪ್ಪನ ದರ್ಶನದ ಜತೆಗೆ ಮಕರಜ್ಯೋತಿ ದರ್ಶನವನ್ನು ಅಯ್ಯಪ್ಪ ಸ್ವಾಮಿ ಭಕ್ತರು ಕಣ್ತುಂಬಿಕೊಂಡರು.ಪ್ರತಿವರ್ಷ ಮಕರ ಸಂಕ್ರಮಣದ ಸಂದರ್ಭದಲ್ಲಿ ಈ ಮಕರಜ್ಯೋತಿಯ ದರ್ಶನವಾಗುತ್ತಿದ್ದು, ಈ ವರ್ಷ ಇಂದು ಮಕರಜ್ಯೋತಿಯ ದರ್ಶನವಾಗಿದೆ. ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂರು ಬಾರಿ ಮೂಡಿದ ಮಕರಜ್ಯೋತಿಯನ್ನು ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುವ ಭಕ್ತಿಪರವಶತೆಯ ಹರ್ಷೋದ್ದಾರದೊಂದಿಗೆ ಭಕ್ತರು ಕಣ್ಣುಂಬಿಕೊಂಡರು.ಅತ್ಯಂತ ಮಹತ್ವದ ವಿದ್ಯಮಾನವಾದ ಇದರ ದರ್ಶನಕ್ಕೆಂದೇ ಸಹಸ್ರಾರು ಭಕ್ತರು ಶಬರಿಮಲೆಗೆ ಬಂದಿದ್ದು, ಕೆಲವು ಗಂಟೆಗಳಿಂದ ಇದಕ್ಕಾಗಿ ಕಾದಿದ್ದರು. ಕೊನೆಗೂ ಕಾಣಿಸಿದ ಮಕರಜ್ಯೋತಿಯನ್ನು ಕಂಡು, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಳದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರಿದವು.