ನ್ಯೂಸ್ ನಾಟೌಟ್ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತಂದಿಡಲಾಗಿದ್ದ ಸಾಮಗ್ರಿಗಳನ್ನು ಇಬ್ಬರು ಮಹಿಳೆಯರು ಕಳವುಗೈದ ಘಟನೆ ನಡೆದಿದೆ.ಕಾಸರಗೋಡಿನ ಕುಂಬಳೆಯಲ್ಲಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳೆಯರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಗುಜರಿ ಅಂಗಡಿಗೆ ಮಾರಾಟಕ್ಕೆ ಯತ್ನ:
ಬಂಧಿತ ಮಹಿಳೆಯರು ತಮಿಳುನಾಡು ಮೂಲದವರೆಂದು ತಿಳಿದು ಬಂದಿದೆ.ರಾಣಿ (39) ಮತ್ತು ಸುಧಾ (30) ಬಂಧಿತರು. ಕುಂಬಳೆ ದೇವಿ ನಗರದಲ್ಲಿ ವಾಸವಾಗಿರುವ ಇವರು ರಸ್ತೆ ಬದಿಯಲ್ಲಿದ್ದ 81 ಕಿಲೋ ಅಲ್ಯೂಮಿನಿಯಂ ಹಾಗೂ ಕಬ್ಬಿಣದ ಸರಳನ್ನು ಕಳವು ಮಾಡಿದ್ದಾರೆ. ಇದನ್ನು ಗುಜರಿ ಅಂಗಡಿಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.ಕೂಡಲೇ ಸ್ಥಳಕ್ಕೆ ತಲುಪಿದ ಪೊಲೀಸರು ಮಹಿಳೆಯರಿಬ್ಬರನ್ನು ಬಂಧಿಸಿದರು. ವಿಚಾರಿಸಿದಾಗ ಹೆದ್ದಾರಿ ಬದಿಯಿಂದ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.