ನ್ಯೂಸ್ ನಾಟೌಟ್ : ಶಬರಿಮಲೆಗೆ ತೆರಳಿದ್ದ ಯುವಕನೊಬ್ಬ ಸಮುದ್ರಪಾಲಾದ ಘಟನೆ ಕೇರಳದ ಕಣ್ಣೂರುವಿನಲ್ಲಿ ಇಂದು ಮುಂಜಾನೆ ನಡೆದಿದೆ. ಕೊಡಗು ಜಿಲ್ಲೆಯ ಮಡಿಕೇರಿ ಜಲಾಶಯ ಬಡಾವಣೆ ನಿವಾಸಿ ಶಶಾಂಕ್ (25) ಮೃತ ದುರ್ದೈವಿ.
ಸಮುದ್ರದ ಅಲೆಗೆ ಸಿಲುಕಿದ ಯುವಕರು:
ಶಬರಿಮಲೆಯಿಂದ ಮರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಲ್ಲಿಂದ ಮನೆಗೆಂದು ಹೊರಟವರು ಕಣ್ಣೂರು ಬೀಚ್ ಗೆ ತೆರಳಿದ್ದಾರೆ.ಈ ವೇಳೆ ಶಶಾಂಕ್ ಹಾಗೂ ತನ್ನ ಇನ್ನಿಬ್ಬರು ಸ್ನೇಹಿತರೊಂದಿಗೆ ಕಣ್ಣೂರು ಸಮುದ್ರಕ್ಕೆ ಈಜಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಸಮುದ್ರದಲ್ಲಿನ ಬಾರಿ ಅಲೆಗೆ ಹೊರಬರಲಾಗದೇ ಮೂವರು ಯುವಕರು ಸಮುದ್ರದ ಅಲೆಗೆ ಸಿಲುಕಿದ್ದಾರೆ. ಆದರೆ ಸ್ಥಳೀಯರ ನೆರವಿನಿಂದ ಈ ಪೈಕಿ ಇಬ್ಬರನ್ನು ಅಲ್ಲಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.