ನ್ಯೂಸ್ ನಾಟೌಟ್ : ಕೆಲಸ ಮಾಡುವಾಗ ಭೀಕರ ಗುಡ್ಡ ಕುಸಿತ ಉಂಟಾಗಿ ದುರಂತ ಸಂಭವಿಸಿದೆ. ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸುರತ್ಕಲ್ ನ ಚೇಳೈರು ಗ್ರಾಮದ ಚೇಳೈರು ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ.ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಓಬಲೇಶ್ವರ ಎಂದು ಗುರುತಿಸಲಾಗಿದೆ.
ಕಾರ್ಮಿಕರ ಮೇಲೆ ಬಿದ್ದ ಮಣ್ಣು:
ರೈಲ್ವೇ ಸೇತುವೆಯ ಮೇಲ್ಭಾಗದಲ್ಲಿ ಕಂಬಿಗಳನ್ನು ನೇರಮಾಡುತ್ತಿದ್ದ ಸಂದರ್ಭ ಕಾರ್ಮಿಕರು ಕೆಳಭಾಗದಲ್ಲಿ ಗುಡ್ಡ ಅಗೆಯುತ್ತಿದ್ದರು. ಈ ವೇಳೆ ರೈಲೊಂದು ಏಕಾಏಕಿ ಬಂದು ಹಾದುಹೋದ ಪರಿಣಾಮ ಮಣ್ಣು ಕುಸಿದು ಗುಡ್ಡದ ಕೆಳಭಾಗದಲ್ಲಿ ಅಗೆಯುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ.ಈ ವೇಳೆ ಆರೇಳು ಕಾರ್ಮಿಕರ ಮೇಲೆ ಮಣ್ಣು ಬಿದ್ದಿದೆ. ಈ ಪೈಕಿ ಓಬಳೇಶ್ವರ ಮತ್ತು ಬಳ್ಳಾರಿಯ ಗೋವಿಂದಪ್ಪ ಅವರ ಮೈಮೇಲೆ ಹೆಚ್ಚಿನ ಪ್ರಮಾಣದ ಮಣ್ಣುಬಿದ್ದು ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಓಬಳೇಶ್ವರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಗೋವಿಂದಪ್ಪ ಅವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.ಘಟನೆಗೆ ಸಂಬಂಧಿಸಿ ಕಾರ್ಮಿಕರಾದ ಕಿಟ್ಟರಾಜ ಎಂಬವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.