ಸುಳ್ಯ : ಅಡಿಕೆ ಎಲೆ ಹಳದಿ ರೋಗದಿಂದ ಈ ಭಾಗದ ರೈತರು ಸಂಕಷ್ಟಕೊಳಾಗಿರುವುದು ನಿಜ. ಈ ನಿಟ್ಟಿನಲ್ಲಿ ಅಡಿಕೆ ಎಲೆ ಹಳದಿ ರೋಗಕ್ಕೆ ಸಂಬಂಧಪಟ್ಟಂತೆ ಮುಂದಿನ ದಿನದಲ್ಲಿ ಸಮಗ್ರ ಸಂಶೋಧನೆ ನಡೆಸಲಾಗುವುದೆಂದು ಕೇಂದ್ರ ಕೃಷಿ ಸಚಿವೆ ಹಾಗೂ ರಾಜ್ಯ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸುಳ್ಯದ ದುರ್ಗಾರಮೇಶ್ವರಿ ಕಲಾಮಂದಿರದಲ್ಲಿ ಸುಳ್ಯ ಬಿಜೆಪಿ ಮಂಡಲ ಇದರ ವತಿಯಿಂದ ಸನ್ಮಾನ ಹಾಗೂ ಮನವಿ ಸ್ವೀಕರಿಸಿ ಮಾತನಾಡಿದರು. ಅಡಿಕೆ ಎಲೆಹಳದಿ ರೋಗದಿಂದ ಅರ್ಥಿಕ ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದೊಂದಿಗೆ ಚರ್ಚಿಸಲಾಗುವುದು. ಅರಗ ಜ್ಞಾನೇಂದ್ರರ ನೇತ್ರತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಅವರ ವರದಿಯನ್ನು ತರಿಸಿಕೊಂಡು ಅನುಷ್ಠಾನಗೊಳಿಸಲಾಗುವುದು. ತೆಂಗಿನ ಉತ್ಪಾದನೆಯ ರಪ್ತಿಗಿದ್ದ ನಿಷೇದ ವನ್ನು ಕೇಂದ್ರ ಸರಕಾರ ಈಗ ತಗೆದು ಹಾಕಿದೆ. ಸ್ಥಳೀಯವಾಗಿ ತೆಂಗಿನ ಸಂಸ್ಕರಣ ಘಟಕ ಹಾಗೂ ತೆಂಗಿನ ಉಪ ಉತ್ಪನ್ನಗಳ ಘಟಕಗಳನ್ನು ಸ್ಥಾಪಿಸಿ ಆ ಮೂಲಕ ತೆಂಗು ಬೆಳೆಗಳನ್ನು ಉತ್ತೇಜಿಸಲಾಗುವುದು. ಅಲ್ಲದೆ ತೆಂಗು ಬೆಳೆಗಾರ ಸಂಘ ಸ್ಥಾಪಿಸಿ ಸಂಘದ ಮೂಲಕ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು ಎಂದು ಹೇಳಿದರು.
ಸಚಿವ ಅಂಗಾರ ಹಾಗೂ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಅಡಿಕೆ ಎಲೆ ಹಳದಿ ರೋಗದ ಸಂಶೋಧನೆ ಮಾಡಿ ಪರಿಹಾರ ಒದಗಿಸಬೇಕು. ರಬ್ಬರ್ ಆಮದು ನಿಲ್ಲಿಸಬೇಕು. ತೆಂಗು ಸಂಸ್ಕರಣಾ ಘಟಕ ಹಾಗೂ ಉಪ ಉತ್ಪನ್ನ ಘಟಕ ಸ್ಥಾಪಿಸಬೇಕು ಹಾಗೂ ಇತರ ಬೇಡಿಕೆಗಳನ್ನು ಮುಂದಿಟ್ಟರು.