ನ್ಯೂಸ್ ನಾಟೌಟ್ : ಹುಡುಗಿಯರನ್ನು ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ಸಪ್ಲೈ ಮಾಡುತ್ತಿದ್ದ ಸ್ಯಾಂಟ್ರೋ ರವಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಕಳೆದ ೧೧ ದಿನಗಳಿಂದ ಸ್ಯಾಂಟ್ರೋ ರವಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆ ಮರೆಸಿಕೊಂಡಿದ್ದ. ಹುಡುಗಿಯರನ್ನು ತಲೆ ಹಿಡಿದು ವ್ಯವಹಾರ ಮಾಡಿಕೊಂಡು ಕಂತೆ..ಕಂತೆ ನೋಟು ಎಣಿಸುತ್ತಿದ್ದ ಸ್ಯಾಂಟ್ರೋ ರವಿ ಪೊಲೀಸರ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಗುರುತಿಸಿಕೊಂಡಿದ್ದ. ಸದ್ಯ ಗುಜರಾತ್ ನಲ್ಲಿಆತನನ್ನು ಬಂಧಿಸಲಾಗಿದೆ.
ಕಳೆದ ೧೧ ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ. ಮೈಸೂರಿನಲ್ಲಿ ಆತ ಇದ್ದ ಎನ್ನಲಾಗುತ್ತಿದೆ. ಈತ ಅಲ್ಲಿ ಇದ್ದಾನೆ ಇಲ್ಲಿ ಇದ್ದಾನೆ ಅನ್ನುವ ಗುಮಾನಿ ಪೊಲೀಸರಿಗೆ ಇತ್ತು. ಮೈಸೂರು, ರಾಮನಗರ, ಮಂಗಳೂರು, ಉಡುಪಿಯಲ್ಲಿ ತಲೆಮರೆಸಿಕೊಂಡಿದ್ದ ಎಂದು ಹೇಳಲಾಗಿದೆ. ಆದರೆ ಇದೀಗ ಗುಜರಾತ್ ನಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಈತನ ಬಂಧನಕ್ಕೆ ನಾಲ್ವರು ಎಸ್ಪಿಗಳ ವಿಶೇಷ ತಂಡ ರಚನೆ ಮಾಡಲಾಗಿತ್ತು. ಸದ್ಯ ಬಂಧನಕ್ಕೆ ಒಳಗಾಗುತ್ತಿರುವ ಸ್ಯಾಂಟ್ರೋ ರವಿಯನ್ನು ಗುಜರಾತ್ ನಿಂದ ಕರೆ ತರಲಾಗುತ್ತಿದೆ ಎನ್ನಲಾಗುತ್ತಿದೆ.