ನ್ಯೂಸ್ ನಾಟೌಟ್ : ಅಯ್ಯಪ್ಪ ಸ್ವಾಮಿ ಪ್ರಸಾದ ‘ಅರಾವಣಂ’ ಮಾರಾಟಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ.ಏಲಕ್ಕಿಯಲ್ಲಿ ಸಾಕಷ್ಟು ಪ್ರಮಾಣದ ಕ್ರಿಮಿನಾಶಕ ಇರುವುದು ಪತ್ತೆಯಾದ ಪರಿಣಾಮ 65
ಕೋಟಿ ರೂ. ಮೌಲ್ಯದ ಅಯ್ಯಪ್ಪ ಸ್ವಾಮಿ ಪ್ರಸಾದ ‘ಅರಾವಣಂ’ ಮಾರಾಟಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.
ಅರವಣ ಪ್ರಸಾದಕ್ಕೆ ಬಳಸಿದ ಏಲಕ್ಕಿಯಲ್ಲಿ 95 ಬಗೆಯ ಕ್ರಿಮಿನಾಶಕಗಳು ಇರುವುದು ಕೆಮಿಕಲ್ ಟೆಸ್ಟ್ನಲ್ಲಿ ಖಚಿವಾಗಿದೆ.ಇದರ ಆಧಾರದ ಮೇಲೆ ಕೇರಳ ಹೈಕೋರ್ಟ್ ಅರಾವಣಂ ವಿತರಣೆಗೆ ತಕ್ಷಣ ತಡೆ ನೀಡಿದೆ. ಅರಾವಣಂ ಇರುವ ಆರೂವರೆ ಲಕ್ಷ ಟಿನ್ಗಳನ್ನು ಪೂರೈಕೆಗಾಗಿ ಸಂಗ್ರಹ ಮಾಡಲಾಗಿತ್ತು. ಆದರೆ, ಹೈಕೋರ್ಟ್ ವಿತರಣೆ ಮಾಡದಂತೆ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಹತ್ವದ ನಿರ್ದೇಶನ ನೀಡಿದೆ.
ಏಳು ಟನ್ ಏಲಕ್ಕಿಯನ್ನು ಈ ಬಾರಿ 10. 9 ಲಕ್ಷ ರೂ.ಗೆ ಓಪನ್ ಟೆಂಡರ್ ಇಲ್ಲದೆ ಖರೀದಿಸಲಾಗಿದೆ. ಆದರೆ, ಇದೀಗ ಏಲಕ್ಕಿಇಲ್ಲದ ಅರಾವಣಂ ಉತ್ಪಾದನೆ ರಾತ್ರಿಯಿಂದಲೇ ಆರಂಭವಾಗಿದೆ. ಕೇವಲ ಎಂಟು ಗಂಟೆಗಳಲ್ಲಿ ವಿತರಣೆಗೆ ಸಿದ್ಧವಾಗಲಿದೆ. ಏಲಕ್ಕಿ ರಹಿತ ಅರಾವಣಂ ಇಂದು (ಜ.12) ಬೆಳಗ್ಗೆಯಿಂದ ಕೌಂಟರ್ನಲ್ಲಿ ಲಭ್ಯವಿರುತ್ತದೆ. ಎರಡೂವರೆ ಲಕ್ಷ ಟಿನ್ ಅರಾವಣಂ ಅನ್ನು ಏಕಕಾಲದಲ್ಲಿ ತಯಾರಿಸಬಹುದು. ದಿನಕ್ಕೆ ಸರಾಸರಿ ಮೂರು ಲಕ್ಷ ಟನ್ಗಳು ಮಾರಾಟವಾಗುತ್ತವೆ. ನಿನ್ನೆ ಸಂಜೆ 5 ಗಂಟೆಗೆ ಅರಾವಣಂ ಮಾರಾಟವನ್ನು ಶಬರಿಮಲೆಯಲ್ಲಿ ನಿಲ್ಲಿಸಲಾಗಿತ್ತು. ಸಾವಿರಾರು
ಯಾತ್ರಿಕರು ಅರಾವಣಂ ಪಡೆಯದೆ ಹಿಂತಿರುಗಿದರು.